ಬೆಳ್ತಂಗಡಿ: ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಜರ್ಸಿ ದನವೊಂದನ್ನು ಯುವಕನೊಬ್ಬ ತನ್ನ ಪ್ರಾಣದ ಹಂಗು ಕೊರೆದು ರಕ್ಷಿಸಿರುವ ಘಟನೆ ವೇಣೂರಿನಲ್ಲಿ ನಡೆದಿದೆ.
ವೇಣೂರು ಗ್ರಾಮ ಪಂಚಾಯತ್ ಕರಿಮಣೇಲು ಗ್ರಾಮದ ಖಂಡಿಗ ಶ್ರೀ ಜಯರಾಮ್ ಶೆಟ್ಟಿಯವರ ಬೆಲೆಬಾಳುವ ಜೆರ್ಸಿ ದನವೊಂದು ನಿನ್ನೆ ಬೆಳಗ್ಗೆ ಸುಮಾರು 10.30 ರ ಸಮಯಕ್ಕೆ ನೆರೆಯಿಂದ ಫಲ್ಗುಣಿ ನದಿಯ ಮಧ್ಯೆ ಸಿಲುಕಿಕೊಂಡಿದ್ದು ನೆರೆಯಲ್ಲಿ ಕೊಚ್ಚಿಕೊಂಡು ಹೋಗುವ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು ವೇಣೂರು ಆರಕ್ಷಕ ಠಾಣೆ ಸಿಬ್ಬಂದಯವರೊಂದಿಗೆ ಕೈಜೋಡಿಸಿ ಸೊಂಟಕ್ಕೆ ಹಗ್ಗದ ಮೂಲಕ ನದಿಗೆ ಹಾರಿ ದನವನ್ನು ದಡಕ್ಕೆ ಎಳೆದುಕೊಂಡು ಬಂದು ರಕ್ಷಿಸಿದ ಮೂಡುಕೋಡಿ ಗ್ರಾಮದ ಪರಿಣಿತ ಈಜುಗಾರ ಹಾಗು ಆಪತ್ಬಾಂಧವ ಇಂತಿಯಾಝ್ ನಡ್ತಿಕಲ್ ಹಾಗು ಹಸನಬ್ಬ ಕೈರೋಳಿ.
ಇಬ್ಬರು ಆಪತ್ಬಾಂಧವರನ್ನು ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹಾಗು ದನದ ಮಾಲಕ ಶ್ರೀ ಜಯರಾಮ್ ಶೆಟ್ಟಿಯವರು ಅಭಿನಂದಿಸಿದ್ದಾರೆ. ಸೂಕ್ತ ಸಮಯದಲ್ಲಿ ಸ್ಪಂದಿಸಿದ ಬೆಳ್ತಂಗಡಿ ಅಗ್ನಿಶಾಮಕ ದಳದ ಶ್ರೀ ಕೃಷ್ಣ ಮತ್ತು ಸಿಬ್ಬಂದಿ ಹಾಗೂ ವೇಣೂರು ಆರಕ್ಷಕ ಠಾಣೆ ಉಪನಿರೀಕ್ಷಕ ಶ್ರೀ ಲೊಲಾಕ್ಷ, ಸಿಬ್ಬಂದಿ ಲತಾ ಶೆಟ್ಟಿ, ಪ್ರಶಾಂತ್,ದೇವರಾಜ್ ಮತ್ತು ಮಾಜಿ ಗ್ರಾ.ಪಂ ಸದಸ್ಯ ಶ್ರೀ ಯಶೋಧರ ಹೆಗ್ಡೆ ಉಪಸ್ಥಿತರಿದ್ದು ಸಹಕರಿಸಿದ್ದರು.


