Wednesday, June 3, 2026
Homeಕರಾವಳಿಕಾಸರಗೋಡುಕಾಸರಗೋಡಿನಲ್ಲಿ ಯುವಕನ ಬರ್ಬರ ಹತ್ಯೆ, ವೈಯುಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಕೊಲೆ ಸಾಧ್ಯತೆ

ಕಾಸರಗೋಡಿನಲ್ಲಿ ಯುವಕನ ಬರ್ಬರ ಹತ್ಯೆ, ವೈಯುಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಕೊಲೆ ಸಾಧ್ಯತೆ

- Advertisement -
- Advertisement -

ಕಾಸರಗೋಡು : ಯುವಕನನ್ನು ಕಡಿದು ಕೊಲೆಗೈದ ಘಟನೆ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಕೊಲೆಗೀಡಾದವರನ್ನು ನಾಯ್ಕಾಪುವಿನ ಹರೀಶ್ ಎಂದು ಗುರುತಿಸಲಾಗಿದೆ.

ಮನೆಯಿಂದ 100 ಮೀಟರ್ ದೂರದ ದಾರಿ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರೀಶ್ ನನ್ನು ಗಮನಿಸಿದ ಪಾದಚಾರಿಯೋರ್ವರು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕುಂಬಳೆ ಹಾಗೂ ಬಳಿಕ ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿಸಿದ್ದಾರೆ.

ನಾಯ್ಕಾಪುವಿನ ಆಯಿಲ್ ಮಿಲ್ ವೊಂದರಲ್ಲಿ ದುಡಿಯುತ್ತಿದ್ದ ಹರೀಶ್ ರಾತ್ರಿ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಕುತ್ತಿಗೆ ಹಾಗೂ ತಲೆಗೆ ಬಿದ್ದ ಗಂಭೀರ ಸ್ವರೂಪದ ಪೆಟ್ಟು ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ವೈಯುಕ್ತಿಕ ದ್ವೇಷ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ

- Advertisement -

Latest News

error: Content is protected !!