Friday, June 5, 2026
Homeತಾಜಾ ಸುದ್ದಿನಾಯಿ ಬೊಗಳಿದ್ದಕ್ಕೆ ಶ್ವಾನದ ಮಾಲೀಕನನ್ನೇ ಕೊಂದ ಪಾಪಿಗಳು..

ನಾಯಿ ಬೊಗಳಿದ್ದಕ್ಕೆ ಶ್ವಾನದ ಮಾಲೀಕನನ್ನೇ ಕೊಂದ ಪಾಪಿಗಳು..

- Advertisement -
- Advertisement -

ಲಕ್ನೋ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತಮ್ಮನ್ನು ನೋಡಿ ನಾಯಿ ಬೊಗಳಿತು ಅನ್ನೋ ಕಾರಣಕ್ಕೆ  ನಾಯಿಯ ಮಾಲೀಕನನ್ನೇ ಮೂವರು ಯುವಕರು  ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಉತ್ತರಪ್ರದೇಶದ ಸಿತಾಪುರ ಜಿಲ್ಲೆಯಲ್ಲಿ ನಡೆದಿದೆ. ಸಚಿನ್ ಕುಮಾರ್ (25) ಕೊಲೆಯಾದ ಯುವಕ.

ಸಿಧೌಲಿಯ ಕಾಸ್ಬಾ ಬಜಾರ್ ಪ್ರದೇಶದ ನಿವಾಸಿಯಾಗಿರುವ ಸಚಿನ್ ಭಾನುವಾರ ರಾತ್ರಿ ತನ್ನ ಸಾಕು ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಮೂವರು ತಡೆದಿದ್ದಾರೆ. ಈ ವೇಳೆ ಮೂವರಿಗೆ ಶ್ವಾನ ಗದರಿಸಿದೆ. ಇದು ಅವರನ್ನು ಸಿಟ್ಟಿಗೇಳುವಂತೆ ಮಾಡಿದೆ. ಅಲ್ಲದೆ ಮೂವರು ಕೋಪದಿಂದ ಸಚಿನ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಸಚಿನ್ ಜೋರಾಗಿ ಕಿರುಚಿಕೊಂಡಿದ್ದಾರೆ. ಕೂಡಲೇ ಸಚಿನ್ ಸಹೋದರರಾದ ಸೋನು ಹಾಗೂ ಸುನಿಲ್ ಸಹಾಯಕ್ಕಾಗಿ ಧಾವಿಸಿದ್ದಾರೆ. ಈ ವೇಳೆ ಅವರಿಗೂ ಆರೋಪಿಗಳು ಥಳಿಸಿದ್ದಾರೆ.  ಕೂಡಲೇ ಸ್ಥಳೀಯರು ಜಮಾಯಿಸಿದ್ದು, ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇನ್ನು ಆರೋಪಿಗಳನ್ನು ಉಮಾ, ರೋಹಿತ್ ಮತ್ತು ಗೋವಿಂದ್ ಎಂದು ಗುರುತಿಸಲಾಗಿದೆ. ಮೂವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸಚಿನ್ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!