Thursday, March 28, 2024
Homeತಾಜಾ ಸುದ್ದಿಕರ್ನಾಟಕದ ಕೋವಿಡ್ ಟೆಸ್ಟ್ ರಿಪೋರ್ಟ್ ಒಪ್ಪದ ಕೇರಳ ಸರ್ಕಾರ- ಸಂಕಷ್ಟದಲ್ಲಿ ರಾಜ್ಯದ ಅಯ್ಯಪ್ಪ ಮಾಲಾಧಾರಿಗಳು!..

ಕರ್ನಾಟಕದ ಕೋವಿಡ್ ಟೆಸ್ಟ್ ರಿಪೋರ್ಟ್ ಒಪ್ಪದ ಕೇರಳ ಸರ್ಕಾರ- ಸಂಕಷ್ಟದಲ್ಲಿ ರಾಜ್ಯದ ಅಯ್ಯಪ್ಪ ಮಾಲಾಧಾರಿಗಳು!..

spot_img
- Advertisement -
- Advertisement -

ಬೆಂಗಳೂರು:ಈಗಾಗಲೇ ಒಂದಿಷ್ಟು ಷರತ್ತುಗಳ ಮೇಲೆ ಕೇರಳ ಸರ್ಕಾರ ಶಬರಿಮಲೆ ಯಾತ್ರೆಗೆ ಅವಕಾಶ ನೀಡಿದೆ. ಆದರೆ ಯಾತ್ರೆ ಪ್ರಾರಂಭವಾದ ಮೇಲೆ ಕರ್ನಾಟಕದ ಮಾಲಾಧಾರಿಗಳು ಅಲ್ಲಿನ ನಿಯಮಕ್ಕೆ ಹೈರಾಣಾಗಿದ್ದಾರೆ. ಕರ್ನಾಟಕದ ಕೋವಿಡ್ ಟೆಸ್ಟ್ ರಿಪೋರ್ಟ್ ಅನ್ನು ಕೇರಳ ಸರ್ಕಾರ ಮಾನ್ಯ ಮಾಡುತ್ತಿಲ್ಲ. ಇದಕ್ಕಾಗಿ ಸ್ಥಳದಲ್ಲೇ ಹಣ ಪಾವತಿಸಿ ನಮ್ಮ ರಾಜ್ಯದಲ್ಲಿ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಈಗಾಗಲೇ ಯಾತ್ರಿಕರು ಆನ್ಲೈನ್ನಲ್ಲಿ ಹೆಸರು ನೋಂದಾಯಿಸಿಕೊಂಡು, ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗಟಿವ್ ವರದಿಯೊಂದಿಗೆ ಶಬರಿಮಲೆಗೆ ಹೋದರೆ, ಅಲ್ಲಿನ ಸಿಬ್ಬಂದಿ ಬಾಗಿಲಲ್ಲೇ ತಡೆದು ಟೆಸ್ಟ್ ಮಾಡಿಸಿಕೊಳ್ಳಲು ಹೇಳುತ್ತಿದ್ದು ಹೊರ ರಾಜ್ಯಗಳಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ತಂದಿರುವ ವರದಿಯನ್ನು ನಿರಾಕರಿಸಿ, 625 ರೂ. ಪಡೆದು ಹೊಸ ಪರೀಕ್ಷೆ ಮಾಡಿಸಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡುವ 48 ಗಂಟೆ ಅವಧಿಗೆ ಮುನ್ನ ಕೋವಿಡ್ 19 ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ ಎನ್ನಲಾಗುತ್ತಿದ್ದುಭಕ್ತರು ದೇವರ ದರ್ಶನ ಪಡೆಯದೇ ಹಿಂತಿರುಗಳೂ ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!