Friday, June 5, 2026
HomeUncategorizedಮಂಗಳೂರು: 2 ಲಕ್ಷ ರೂಪಾಯಿ ಸಾಲ ಪಡೆದು ಹಣದೊಂದಿಗೆ ಪುತ್ರ ಎಸ್ಕೇಪ್ ; ತಂದೆಯಿಂದ ದೂರು...

ಮಂಗಳೂರು: 2 ಲಕ್ಷ ರೂಪಾಯಿ ಸಾಲ ಪಡೆದು ಹಣದೊಂದಿಗೆ ಪುತ್ರ ಎಸ್ಕೇಪ್ ; ತಂದೆಯಿಂದ ದೂರು ದಾಖಲು

- Advertisement -
- Advertisement -

ಮಂಗಳೂರು: 2 ಲಕ್ಷ ರೂಪಾಯಿ ಸಾಲ ಪಡೆದು ಹಣದೊಂದಿಗೆ ಯುವಕನೊಬ್ಬ ಎಸ್ಕೇಪ್ ಆಗಿದ್ದು ಯುವಕ ತಂದೆ ಈ ಬಗ್ಗೆ ದೂರು ದಾಖಲಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಮಾಯಾ ಟ್ರೇಡರ್ಸ್‌ನಲ್ಲಿ ಉದ್ಯೋಗಿಯಾಗಿರುವ ಕೃಷ್ಣ ಶೆಣೈ (23) ನಾಪತ್ತೆಯಾದ ಯುವಕ.

ಈತ ಮೂರು ತಿಂಗಳಿಂದ ಮಾಯಾ ಟ್ರೇಡರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೆಲವರಿಂದ ಸಾಲ ಪಡೆದಿದ್ದು, ಇದನ್ನು ತೀರಿಸುವ ಸಲುವಾಗಿ ಭುವನೇಂದ್ರ ಬ್ಯಾಂಕ್‌ನಿಂದ ಎರಡು ಲಕ್ಷ ರೂಪಾಯಿ ಸಾಲವನ್ನೂ ಕೂಡಾ ಪಡೆದಿದ್ದ. ಆದರೆ ಆತ ಅಂದಿನಿಂದ ನಾಪತ್ತೆಯಾಗಿದ್ದಾನೆ. ಕೃಷ್ಣ  ಶೆಣೈ 5 ಅಡಿ 11 ಇಂಚು ಎತ್ತರ, ಗೋಧಿ ಮೈಬಣ್ಣ, ಸ್ಪೋರ್ಟ್ಸ್ ಟ್ರಿಮ್ ಮಾಡಿದ ಗಡ್ಡ, ಸಾಧಾರಣ ಮೈಕಟ್ಟು ಮತ್ತು ಎರಡೂ ಕೈಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾನೆ. ಅವರು ಕನ್ನಡ, ಕೊಂಕಣಿ, ತುಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾನೆ. ಈ ಕುರಿತು ಈತನ ತಂದೆ ಪಾಡುರಂಗ ಶೆಣೈ ನೀಡಿದ ದೂರಿನಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!