- Advertisement -
- Advertisement -
ಕುಂದಾಪುರ : ಬೀಜಾಡಿ ಸಮುದ್ರದಲ್ಲಿ ಬಲೆ ಬಿಡಲು ಹೋದ ಯುವಕ ನೀರುಪಾಲಾಗಿರುವ ಘಟನೆ ಕೋಟೇಶ್ವರ ಹಳೆಅಳಿವೆ ಬಳಿ ನಡೆದಿದೆ.ಬೀಜಾಡಿ ಪೆಟ್ನಿ ಮನೆ ಕುಮಾರ್ ಅವರ ಪುತ್ರ ಮೇಘರಾಜ್ (24) ಮೃತ ಯುವಕ.
ಮೇಘರಾಜ್ ಅವರು ಬೆಳಿಗ್ಗೆ ಹಳಿಅಳಿವೆ ಬಳಿ ಸಮುದ್ರದಲ್ಲಿ ಮರಣಬಲೆ ಬಿಡಲೆಂದು ಹೋದಾಗ ಸಮುದ್ರದ ಅಲೆಗೆ ಸಿಲುಕಿ ನೀರುಪಾಲಾಗಿದ್ದು ಸಂಜೆ ವೇಳೆ ಬೀಜಾಡಿ ಸಮೀಪ ಕಡಲ ಎಡಭಾಗದಲ್ಲಿ ಮೃತದೇಹ ದಡ ಪಟ್ಟೆಯಾಗಿದೆ.
ತಕ್ಷಣ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಗಂಗೊಳ್ಳಿ ಹಾಗೂ K.N.D ಸುದರ್ಶನ್ ಎಸ್ ಕುಂದರ್, ಕೃಷ್ಣ ಕಾಂಚನ್, ಸಂತೋಷ್ ಪೂಜಾರಿ, ಸುಧಾಕರ್ ಖಾರ್ವಿ ಇವರು ಮೃತದೇಹವನ್ನು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
- Advertisement -