- Advertisement -
- Advertisement -
ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಮಂಗಳೂರಿನ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಕುದ್ರೋಳಿಯ ನಾಹಿದ್ ಸಫಾನ್ (28) ಮೃತಪಟ್ಟ ಯುವಕ.
ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಫಾನ್ ಗುರುವಾರ ಮಧ್ಯಾಹ್ನ ಯಲಹಂಕ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಯಲಹಂಕದ ನೆಹರೂ ನಗರದಲ್ಲಿ ವಾಸವಾಗಿದ್ದ ಇವರು ತನ್ನ ಸ್ಕೂಟರ್‌ನಲ್ಲಿ ಯಲಹಂಕದಿಂದ ಬೆಂಗಳೂರು ಕಡೆಗೆ ಸರ್ವಿಸ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಯಲಹಂಕ ಬಿಬಿ ರಸ್ತೆಯ ಏರೋ ಡ್ರಂ ಬಳಿ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ ನಾಹಿದ್ ಸಫಾನ್ ತಂದೆ ಮತ್ತು ತಾಯಿ ಹಾಗೂ ಅಣ್ಣ, ಅಕ್ಕ, ಪತ್ನಿಯನ್ನು ಅಗಲಿದ್ದಾರೆ.ನಾಹಿದ್ ಸಫಾನ್‌ರ ಸಂಬಂಧಿ ವಸೀಂ ಶರೀಫ್ ನೀಡಿದ ದೂರಿನಂತೆ ಯಲಹಂಕ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -