- Advertisement -
- Advertisement -
ಮೂಡಬಿದರೆ; ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣದ ಸಾಮಾಗ್ರಿಗಳನ್ನು ಕಳ್ಳತನ ಮಾಡಿದಾತನನ್ನು ಮೂಡಬಿದರೆ ಪೊಲೀಸರು ಬಂಧಿಸಿದ್ದಾರೆ. ಮೂಡಬಿದರೆಯ ತೋಡಾರಿನ ಹಿದಾಯ್ ನಗರದ ನಿವಾಸಿ ಮೊಹಮ್ಮದ್ ಸಾಹೀಲ್(21) ಬಂಧಿತ ಆರೋಪಿ.
ಈತ ಮೂಡಬಿದ್ರೆ ಠಾಣಾ ವ್ಯಾಪ್ತಿಯ ಬೆಳುವಾಯಿ ಹಾಗೂ ಕೆಸರಗದೆ ಎಂಬಲ್ಲಿ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಪೈಪ್ ಗಳನ್ನು ಕಳ್ಳತನ ಮಾಡಿದ್ದ. ಈತನಿಂದ ಸುಮಾರು 2,50,000 /- ರೂ ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಕಬ್ಬಿಣದ ಪೈಪನ್ನು ವಶಕ್ಕೆ ಪಡೆಯಲಾಗಿದೆ.
- Advertisement -