- Advertisement -
![]()
- Advertisement -
ಕಾಸರಗೋಡು: ಡಿವೈಎಫ್ಐ ನಾಯಕಿ ಯುವ ವಕೀಲೆ ಆಹ್ಮಹತ್ಯಗೆ ಶರಣಾಗಿರುವ ಘಟನೆ ಕುಂಬ್ಳೆಯಲ್ಲಿ ನಡೆದಿದೆ. ರಂಜಿತಾ(30) ಮೃತ ದುರ್ದೈವಿ.ಡಿವೈಎಫ್‌ಐ ಮಹಿಳಾ ಸಂಘದ ಪ್ರದೇಶ ಸಮಿತಿಯ ಅಧ್ಯಕ್ಷೆ ಮತ್ತು ವಕೀಲೆಯಾಗಿರುವ ರಂಜಿತಾ ಕುಂಬ್ಳೆಯಲ್ಲಿರುವ ತಮ್ಮ ಕಚೇರಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಂದ್ರನ್ ಮತ್ತು ಕುಂಬ್ಳ ಬತ್ತೇರಿಯ ವಾರಿಜಾಕ್ಷಿ ದಂಪತಿಯ ಪುತ್ರಿ. ಅವರ ಪತಿ ಕೃತೇಶ್, ಅವರ ಎಂಟು ವರ್ಷದ ಮಗ ಮತ್ತು ಅವರ ಸಹೋದರ ಸುಜಿತ್ ಅವರನ್ನು ಅಗಲಿದ್ದಾರೆ.
ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕೆಯ ಸಾವು ಪಕ್ಷದ ಕಾರ್ಯಕರ್ತರು ಮತ್ತು ಸಹಚರ ಅಘಾತಕ್ಕೆ ಉಂಟು ಮಾಡಿದೆ. ರಂಜಿತಾ ಪತಿ ಮತ್ತು ಮಗುವನ್ನು ಅಗಲಿದ್ದಾರೆ.
- Advertisement -


