Thursday, June 4, 2026
Homeಕರಾವಳಿಉಡುಪಿಕುಂದಾಪುರ: ಯುವತಿಯ ಏಕಾಂಗಿ ಬೈಕ್‌ ಯಾತ್ರೆ ಯಶಸ್ವಿ: ಕಾಶ್ಮೀರದಿಂದ ಹುಟ್ಟೂರಿಗೆ ಆಗಮಿಸಿದ ಸಾಕ್ಷಿ

ಕುಂದಾಪುರ: ಯುವತಿಯ ಏಕಾಂಗಿ ಬೈಕ್‌ ಯಾತ್ರೆ ಯಶಸ್ವಿ: ಕಾಶ್ಮೀರದಿಂದ ಹುಟ್ಟೂರಿಗೆ ಆಗಮಿಸಿದ ಸಾಕ್ಷಿ

- Advertisement -
- Advertisement -

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕುಂಭಾಶಿಯಿಂದ ಕಾಶ್ಮೀರದ ತನಕ ಸುಮಾರು 6 ಸಾವಿರ ಕಿ.ಲೋ ಮೀಟರ್ ಏಕಾಂಗಿಯಾಗಿ ಮಹಿಳಾ ಸಶಕ್ತಿಕರಣದ ಜಾಗೃತಿಯ ಸಂದೇಶದೊಂದಿಗೆ ಪಯಣ ಆರಂಭಿಸಿದ್ದ ಕುಂಭಾಶಿಯ ಸಾಕ್ಷಿ ಹೆಗಡೆ ಇಂದು ಹುಟ್ಟೂರಿಗೆ ಮರಳಿದ್ದಾರೆ

ಮೇ.25 ರಂದು ಬೆಳಿಗ್ಗೆ 7:30ಕ್ಕೆ ಕುಂಭಾಶಿಯಿಂದ ಕಾಶ್ಮೀರಕ್ಕೆ ಏಕಾಂಗಿಯಾಗಿ ಬೈಕ್ ಯಾತ್ರೆ ಹೊರಟಿದ್ದು, ರವಿವಾರ ಗೋಕರ್ಣ ತಲುಪಿ ಅಲ್ಲಿಂದ ಇಂದು ಮುಂಜಾನೆ ಕುಂಭಾಶಿ ಗ್ರಾಮ ಪಂಚಾಯತ್ ಗೆ ಬಂದು ತಲುಪಿದ್ದಾರೆ. ಕುಂಭಾಸಿಗೆ ಆಗಮಿಸುತ್ತಿದ್ದಂತೆ ಕುಂಭಾಶಿ ಗ್ರಾಮ ಪಂಚಾಯತ್ ವತಿಯಿಂದ ಸಾಕ್ಷಿಯ ಸಾಹಸವನ್ನು ಗುರುತಿಸಿ ಸನ್ಮಾನಿಸಲಾಯಿತು. ಮೂಲತಃ ಇಡುಗುಂಜಿಯವರಾದ, ಪ್ರಸ್ತುತ ಕುಂಭಾಶಿಯಲ್ಲಿ ನೆಲೆಸಿರುವ ಶಿವರಾಮ ಹೆಗಡೆ ಹಾಗೂ ಪುಷ್ಪಾ ದಂಪತಿಗಳ ತೃತೀಯ ಪುತ್ರಿಯಾದ ಸಾಕ್ಷಿ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತೃತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ.

- Advertisement -

Latest News

error: Content is protected !!