Sunday, June 7, 2026
Homeಕರಾವಳಿಉಡುಪಿಕಾರ್ಕಳ; ನಾರಾವಿಯಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಯುವತಿ ಸಾವು

ಕಾರ್ಕಳ; ನಾರಾವಿಯಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಯುವತಿ ಸಾವು

- Advertisement -
- Advertisement -

ಕಾರ್ಕಳ; ಆಕಸ್ಮಿಕವಾಗಿ ಕೆರೆಗೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ನಾರಾವಿ ಗ್ರಾಮದ ಅರಸಿಕಟ್ಟೆ ಎಂಬಲ್ಲಿ ನಡೆದಿದೆ. ನಾರಾವಿ ಗ್ರಾ.ಪಂ. ಸದಸ್ಯ ರಾಜವರ್ಮ ಜೈನ್‌ ಅವರ ಪುತ್ರಿ ಸುರಕ್ಷಾ ಜೈನ್‌ (23) ಮೃತ ಯುವತಿ.

ಸುರಕ್ಷಾ ಮನೆ ಸಮೀಪದ ದೊಡ್ಡಪ್ಪನ ಮನೆಗೆ ತೆರಳಿ ಕೆರೆ ಬದಿಯ ಕಾಲು ದಾರಿಯಲ್ಲಿ ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಸಹೋದರ ತಕ್ಷಣ ಕೆರೆಗೆ ಹಾರಿದ್ದರೂ ರಕ್ಷಿಸಲು ಸಾಧ್ಯವಾಗಿಲ್ಲ.

ಈ ವೇಳೆ ಘಟನೆಯಿಂದ ಆಘಾತಗೊಂಡ ತಂದೆ ರಾಜವರ್ಮ ಜೈನ್‌ ಕುಸಿದು ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪದವಿ ಶಿಕ್ಷಣ ಮುಗಿಸಿದ್ದ ಸುರಕ್ಷಾ ಜೈನ್‌ ಮನೆಯಲ್ಲೇ ಇದ್ದರು ಎನ್ನಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!