Saturday, June 6, 2026
Homeತಾಜಾ ಸುದ್ದಿಇಂದು ಅಪ್ಪು ಅಭಿಮಾನಿಗಳಿಗೆ ಇದು ಸೂಪರ್ ಸುದ್ದಿ; ಪುನೀತ್ ಅವರ ಕನಸಿನ ಕೂಸು ಗಂಧದ ಗುಡಿ...

ಇಂದು ಅಪ್ಪು ಅಭಿಮಾನಿಗಳಿಗೆ ಇದು ಸೂಪರ್ ಸುದ್ದಿ; ಪುನೀತ್ ಅವರ ಕನಸಿನ ಕೂಸು ಗಂಧದ ಗುಡಿ ಸಿನಿಮಾದ ಟ್ರೈಲರ್ ರಿಲೀಸ್

- Advertisement -
- Advertisement -

ಬೆಂಗಳೂರು : ಇಂದು ಅಪ್ಪು ಅಭಿಮಾನಿಗಳಿಗೆ ಅತ್ಯಂತ ಖುಷಿಯ ದಿನ. ಯಾಕಂದ್ರೆ ಪುನೀತ್ ರಾಜ್‍ಕುಮಾರ್ ನಟನೆಯ ಡಾಕ್ಯುಮೆಂಟರಿ ಮಾದರಿಯ ಗಂಧದ ಗುಡಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

ಇಂದು ಬೆಳಗ್ಗೆ 9.45ಕ್ಕೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಗಂಧದ ಗುಡಿ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದ್ದು, ಅಭಿಮಾನಿಗಳಿಗಾಗಿ ಟ್ರೈಲರ್ ನೋಡಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಚಿತ್ರಮಂದಿರಕ್ಕೆ ಪುನೀತ್ ಕುಟುಂಬ ಕೂಡ ಭಾಗಿಯಾಗಲಿದೆ.

ಗಂಧದ ಗುಡಿ ಪುನೀತ್ ರಾಜ್‍ಕುಮಾರ್ ನಟನೆಯ ಕನಸಿನ ಪ್ರಾಜೆಕ್ಟ್. ಇದು ಅವರ ಕೊನೆಯ ಸಿನಿಮಾ ಕೂಡ. ಕರ್ನಾಟಕದ ಕಾಡಿನ ಪ್ರಾಣಿ, ಪರಿಸರ, ಜಲಚರ ಹೀಗೆ ಅನೇಕ ಸಂಗತಿಗಳನ್ನು ಇದರಲ್ಲಿ ತಂದಿದ್ದಾರೆ.

- Advertisement -

Latest News

error: Content is protected !!