Saturday, June 6, 2026
Homeತಾಜಾ ಸುದ್ದಿಮುಂದಿನ ವರ್ಷದಿಂದ ಶಾಲೆಗಳಲ್ಲಿ ಯೋಗ‌ ತರಗತಿ ಆರಂಭ : ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಮುಂದಿನ ವರ್ಷದಿಂದ ಶಾಲೆಗಳಲ್ಲಿ ಯೋಗ‌ ತರಗತಿ ಆರಂಭ : ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

- Advertisement -
- Advertisement -

ಬೆಂಗಳೂರು: ಮುಂದಿನ ವರ್ಷದಿಂದ ಶಾಲೆಗಳಲ್ಲಿ ಯೋಗ ಪಠ್ಯಕ್ರಮ ಆರಂಭವಾಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಇಂದು ಮುಂದಿನ ವರ್ಷದಿಂದ ಶಾಲೆಗಳಲ್ಲಿ ಯೋಗ ಆರಂಭಿಸುವುದಾಗಿ ಹೇಳಿದ್ದಾರೆ.

ಬೆಂಗಳೂರು ಹೊರವಲಯದ ಜಿಗಣಿಯಲ್ಲಿ ಎಸ್. ವ್ಯಾಸ ವಿಶ್ವವಿದ್ಯಾನಿಲಯದಲ್ಲಿ ಆರೋಗ್ಯ ತಂತ್ರಜ್ಞಾನ ಕುರಿತ ಆಯು ಆಪ್ ಬಿಡುಗಡೆಗೊಳಿಸಿ ಸಿಎಂ ಈ ಘೋಷಣೆ ಮಾಡಿದ್ದಾರೆ.

ಕೋವಿಡ್ ನಿಂದಾಗಿ ಶಾಲಾ ಕಾಲೇಜುಗಳ ಮಕ್ಕಳ ಮೇಲೆ ಒತ್ತಡದಲ್ಲಿದ್ದು, ವಿದ್ಯಾರ್ಥಿಗಳು ಒತ್ತಡರಹಿತರಾಗಿ ವಿದ್ಯಾಭ್ಯಾಸ ಮಾಡುವ ವಾತಾವರಣ ಇರಬೇಕಿರುವ ಕಾರಣ ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಯೋಗಾಭ್ಯಾಸ ಪರಿಚಯ ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

ಮುಂದಿನ ವರ್ಷದಿಂದ ಹೈಸ್ಕೂಲು, ಕಾಲೇಜು ಹಂತದಲ್ಲಿ ಯೋಗಾಭ್ಯಾಸ ತರಗತಿಗಳು ಬರಲಿದ್ದು, ಈ ಸಂಬಂಧ ಪರಿಣಿತರ ಜತೆ ಚರ್ಚೆ ಮಾಡಿ ಬಳಿಕ ಯೋಗ‌ ಪಠ್ಯಕ್ರಮ ಸಿದ್ಧಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ‌

- Advertisement -

Latest News

error: Content is protected !!