Friday, June 5, 2026
Homeಕರಾವಳಿಮಳಲಿ‌ ಮಸೀದಿ ವಿವಾದ ವಿಚಾರ: ವಿಹಿಂಪ‌ ಅರ್ಜಿ ವಜಾ ಮಾಡುವಂತೆ ಕೋರ್ಟ್ ಮೊರೆ ಹೋದ ಮಸೀದಿ...

ಮಳಲಿ‌ ಮಸೀದಿ ವಿವಾದ ವಿಚಾರ: ವಿಹಿಂಪ‌ ಅರ್ಜಿ ವಜಾ ಮಾಡುವಂತೆ ಕೋರ್ಟ್ ಮೊರೆ ಹೋದ ಮಸೀದಿ ಆಡಳಿತ

- Advertisement -
- Advertisement -

ಮಂಗಳೂರು: ಮಳಲಿ ಮಸೀದಿ ವಿವಾದ ವಿಚಾರದಲ್ಲಿ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಆಡಳಿತದಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.

ವಿಶ್ವಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡುವಂತೆ ಮಸೀದಿ ಆಡಳಿತ ಮಂಗಳೂರು ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

ವಕ್ಫ್ ಬೋರ್ಡ್ ಕಾಯ್ದೆ ಮತ್ತು 1991ರ ಪೂಜಾ ಸ್ಥಳಗಳ ಕಾಯ್ದೆಯಡಿ ವಜಾ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಮೇ 31ರಂದು ಅರ್ಜಿ ಸಂಬಂಧ ವಿಚಾರಣೆ‌ ನಿಗದಿಯಾಗಿದೆ.

ತಾಂತ್ರಿಕ ‌ಕಾರಣ ನೀಡಿ ಮಸೀದಿ ಆಡಳಿತ ಅರ್ಜಿ ಸಲ್ಲಿಕೆ ಮಾಡಿದ್ದು, ವಕ್ಫ್ ಆಸ್ತಿಯಾಗಿರುವ ಕಾರಣದಿಂದ ಹಿಂದೂ ಸಂಘಟನೆಗಳ ಅರ್ಜಿಯನ್ನು ವಜಾ ಮಾಡುವಂತೆ ಕೋರ್ಟ್ ಮೊರೆ ಹೋಗಲಾಗಿದೆ.

- Advertisement -

Latest News

error: Content is protected !!