Thursday, June 4, 2026
Homeಕರಾವಳಿದಕ್ಷಿಣಕನ್ನಡ: ಯಕ್ಷಗಾನ ಕಲಾವಿದ, ಶಿಕ್ಷಕ ಎಂ. ಗೋಪಾಲಕೃಷ್ಣ ಭಟ್ ನಿಧನ

ದಕ್ಷಿಣಕನ್ನಡ: ಯಕ್ಷಗಾನ ಕಲಾವಿದ, ಶಿಕ್ಷಕ ಎಂ. ಗೋಪಾಲಕೃಷ್ಣ ಭಟ್ ನಿಧನ

- Advertisement -
- Advertisement -

ಹೃದಯಾಘಾತದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಲ ಗ್ರಾಮದ ಮುಂಡಮೂಲೆ ನಿವಾಸಿ ನಿವೃತ್ತ ಶಿಕ್ಷಕ ಎಂ. ಗೋಪಾಲಕೃಷ್ಣ ಭಟ್(63) ಎಂಬುವವರು ನಿಧನರಾಗಿದ್ದಾರೆ.

ಇವರು ಮಾದಕಟ್ಟೆ ಅನುದಾನಿತ ಹಿ. ಪ್ರಾ. ಶಾಲೆಯಲ್ಲಿ 30ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಬಳಿಕ ಸತ್ಯಸಾಯಿ ಅನುದಾನಿತ ಹಿ. ಪ್ರಾ. ಶಾಲೆಯಲ್ಲಿ 9ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಭಾರತ ಸೇವಾದಳದ ಶಿಕ್ಷಕರಾಗಿಯೂ ಮೂರು ದಶಕಗಳಿಂದ ಸೇವೆ ಸಲ್ಲಿಸಿದ್ದ ಇವರು ತಾಳಮದ್ದಳೆ ಮತ್ತು ಹವ್ಯಾಸಿ ಯಕ್ಷಗಾನ ವೇಷಧಾರಿಯಾಗಿದ್ದರು.

- Advertisement -

Latest News

error: Content is protected !!