Sunday, May 5, 2024
Homeತಾಜಾ ಸುದ್ದಿರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಜಾರಿ, ರಾತ್ರಿ ವೇಳೆ ಸಂಚಾರಕ್ಕಿರುವ ನಿರ್ಬಂಧಗಳೇನೇನು?

ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಜಾರಿ, ರಾತ್ರಿ ವೇಳೆ ಸಂಚಾರಕ್ಕಿರುವ ನಿರ್ಬಂಧಗಳೇನೇನು?

spot_img
- Advertisement -
- Advertisement -

ಕೋವಿಡ್–19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಡಿಸೆಂಬರ್ 28ರಿಂದ ಮತ್ತೆ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಹೊಸ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಈ ಪ್ರಕಾರ ರಾತ್ರಿ ವೇಳೆ ಸಂಚಾರಕ್ಕಿರುವ ನಿರ್ಬಂಧಗಳೇನೇನು?

  • 1. ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ.
  • ತುರ್ತು ಅಗತ್ಯಗಳನ್ನು ಹೊರತು ಪಡಿಸಿ ಉಳಿದಂತೆ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಇಲ್ಲ.
  • 2. ರೋಗಿಗಳು ಮತ್ತು ಅವರ ಸಹಾಯಕರ ತುರ್ತು ಸಂಚಾರಕ್ಕೆ ಅವಕಾಶ.
  • 3. ಸಂಸ್ಥೆಗಳಲ್ಲಿ ರಾತ್ರಿ ಪಾಳಿಯ ಉದ್ಯೋಗಿಗಳು ಕಂಪನಿಯ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅವಕಾಶವಿದೆ.
  • 4. ಇಂಟರ್‌ನೆಟ್‌ ಸೇವೆಗಳು ಮತ್ತು ದೂರಸಂಪರ್ಕ ಸೇವೆ ಕಂಪನಿಗಳ ಉದ್ಯೋಗಿಗಳು, ವಾಹನಗಳ ಸಂಚಾರಕ್ಕೆ ಅವಕಾಶ (ಐಡಿ ಕಾರ್ಡ್ ಇರಬೇಕು).
  • 5. ವೈದ್ಯಕೀಯ, ಔಷಧ ಮಳಿಗೆಗಳು ಸೇರಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಇತರೆ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ.
  • 6. ಸಾರ್ವಜನಿಕ ಸಾರಿಗೆ, ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶವಿದೆ.

7. ಇಷ್ಟೇ ಅಲ್ಲದೆ, ಕೋವಿಡ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕೆಲವು ಇತರ ನಿರ್ಬಂಧಗಳನ್ನೂ ವಿಧಿಸಲಾಗಿವೆ. ಅವುಗಳು ಹೀಗಿವೆ;

  • 8. ಡಿಸೆಂಬರ್‌ 30ರಿಂದ 2022ರ ಜನವರಿ 2ರ ವರೆಗೂ ರೆಸ್ಟೊರೆಂಟ್‌, ಬಾರ್‌, ಪಬ್‌ ಹಾಗೂ ಹೋಟೆಲ್‌ಗಳಲ್ಲಿ ಸಾಮರ್ಥ್ಯದ ಶೇ 50ರಷ್ಟು ಆಸನಗಳ ಭರ್ತಿಗೆ ಅವಕಾಶ.
  • 9. ಮದುವೆ ಸೇರಿದಂತೆ ಇತರೆ ಸಭೆ ಸಮಾರಂಭಗಳಲ್ಲಿ ಭಾಗಿಯಾಗುವವರ ಸಂಖ್ಯೆ 300 ಜನರನ್ನು ಮೀರುವಂತಿಲ್ಲ.
  • ಮಹಾರಾಷ್ಟ್ರ ಮತ್ತು ಕೇರಳ ಗಡಿ ಭಾಗಗಳಲ್ಲಿ ಓಮೈಕ್ರಾನ್‌ ಸೋಂಕು ತಡೆಗೆ ಕಠಿಣ ನಿಗಾವಹಿಸಲಾಗುತ್ತದೆ.

ಡಿಸೆಂಬರ್ 28ರಿಂದ ಪ್ರತಿ ದಿನ ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಆಧರಿಸಿ ಹತ್ತು ದಿನಗಳ (ಜನವರಿ 7) ಬಳಿಕ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು.

– ಡಾ.ಕೆ.‌ಸುಧಾಕರ್, ಆರೋಗ್ಯ ಸಚಿವ

- Advertisement -
spot_img

Latest News

error: Content is protected !!