ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ವಿವಿಧ ರಾಜ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಉಡುಪಿಯ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ಅಕಾಡೆಮಿಯ ಗೌರವ ಪ್ರಶಸ್ತಿಗೆ ಬೆಳ್ತಂಗಡಿಯ ತೆಂಕುತಿಟ್ಟು ಭಾಗವತ ದಿನೇಶ್ ಅಮ್ಮಣ್ಣಾಯ, ಪುತ್ತೂರಿನ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ, ಮುಂಬೈನ ತೆಂಕುತಿಟ್ಟು ಮತ್ತು ಬಡಗುತಿಟ್ಟು ಭಾಗವತ ಪೋಳ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಬಂಟ್ವಾಳದ ತೆಂಕುತಿಟ್ಟು ವೇಷಧಾರಿ ಚೆನ್ನಪ್ಪ ಗೌಡ ಸಜಿಪ ಅವರನ್ನು ಆಯ್ಕೆ ಮಾಡಲಾಗಿದೆ.
ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಕಾಸರಗೋಡಿನ ತೆಂಕುತಿಟ್ಟು ವೇಷಧಾರಿ ರಘುನಾಥ ಶೆಟ್ಟಿ ಬಾಯಾರು, ಬಂಟ್ವಾಳದ ತೆಂಕುತಿಟ್ಟು ಪ್ರಸಾಧನ ಕಲಾವಿದ ಮತ್ತು ವೇಷಧಾರಿ ದಿವಾಕರ ದಾಸ ಕಾವಳಕಟ್ಟೆ, ಸುಳ್ಯದ ತೆಂಕುತಿಟ್ಟು ಬಣ್ಣದ ವೇಷಧಾರಿ ಸುಬ್ರಾಯ ಪಾಟಾಳಿ ಸಂಪಾಜೆ, ಕುಂದಾಪುರದ ಬಡಗುತಿಟ್ಟು ವೇಷಧಾರಿ ನರಾಡಿ ಭೋಜರಾಜ ಶೆಟ್ಟಿ, ಬೈಂದೂರಿನ ಬಡಗುತಿಟ್ಟು ಚೆಂಡೆ ವಾದಕ ಸದಾನಂದ ಪ್ರಭು, ಬೈಂದೂರಿನ ಬಡಗುತಿಟ್ಟು ಹಾಸ್ಯಗಾರ ಹೊಳೆಮಗೆ ನಾಗಪ್ಪ ಮರಕಾಲ, ಕುಂದಾಪುರದ ತೆಂಕುತಿಟ್ಟು ಮತ್ತು ಬಡಗುತಿಟ್ಟು ಸ್ತ್ರೀ ವೇಷಧಾರಿ ಬಾಬು ಕುಲಾಲ್ ಹಳ್ಳಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಉಡುಪಿಯ ವಿದ್ವಾನ್ ಗಣಪತಿ ಭಟ್, ಬೆಂಗಳೂರಿನ ಡಾ. ಮನೋರಮಾ ಬಿ.ಎನ್. ಮತ್ತು ಉಡುಪಿಯ ಹೆಚ್. ಸುಜಯೀಂದ್ರ ಹಂದೆ 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.


