Thursday, June 4, 2026
Homeತಾಜಾ ಸುದ್ದಿಕಿರಿಯ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣ : ಒಲಿಂಪಿಕ್ ಪದಕ ವಿಜೇತ ಖ್ಯಾತ ಕುಸ್ತಿಪಟು...

ಕಿರಿಯ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣ : ಒಲಿಂಪಿಕ್ ಪದಕ ವಿಜೇತ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅರೆಸ್ಟ್

- Advertisement -
- Advertisement -

ನವದೆಹಲಿ: ಕಿರಿಯ ಕುಸ್ತಿಪಟು ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಂಪಿಕ್ ಪದಕ ವಿಜೇತ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ 23 ವರ್ಷದ ಸಾಗರ್ ರಾಣಾ ಹತ್ಯೆ ನಡೆದಿತ್ತು. ಸುಶೀಲ್ ಕುಮಾರ್ ವಿರುದ್ಧ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ಸುಶೀಲ್ ತಲೆಮರೆಸಿಕೊಂಡಿದ್ದರು. ಇದೀಗ ಸುಶೀಲ್ ಕುಮಾರ್ ಹಾಗೂ ಅವರ ಖಾಸಗಿ ಕಾರ್ಯದರ್ಶಿ ಅಜಯ್ ಕುಮಾರ್ ಇಬ್ಬರನ್ನೂ ಬಂಧಿಸಿರುವುದಾಗಿ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.

ಸಾಗರ್ ರಾಣಾ ತನ್ನ ಸ್ನೇಹಿತರೊಂದಿಗೆ ಛತ್ರಸಾಲ್ ಕ್ರೀಡಾಂಗಣದ ಬಳಿಯ ಮಾಡೆಲ್ ಟೌನ್ ಪ್ರದೇಶದ ಮನೆಯಲ್ಲಿ ವಾಸವಾಗಿದ್ದ. ಜಾಗದ ವಿಚಾರವಾಗಿ ಮೇ 4ರಂದು ಸುಶೀಲ್ ಕುಮಾರ್ ಹಾಗೂ ಸಾಗರ್ ರಾಣಾ ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಸಾಗರ್ ಗುಂಡೇಟಿಗೆ ಬಲಿಯಾಗಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!