Wednesday, April 24, 2024
Homeತಾಜಾ ಸುದ್ದಿಹೀಗೊಂದು ಅಪರೂಪದ ಬಣ್ಣಿಸಲಾಗದ ಪ್ರೇಮಕಥೆ: 50 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಪ್ರೇಮಿಗಳು: ನಿಜವಾದ...

ಹೀಗೊಂದು ಅಪರೂಪದ ಬಣ್ಣಿಸಲಾಗದ ಪ್ರೇಮಕಥೆ: 50 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಪ್ರೇಮಿಗಳು: ನಿಜವಾದ ಪ್ರೀತಿಗೆ ಸಾವಿಲ್ಲ ಅನ್ನೋದು ಇದಕ್ಕೆನಾ?

spot_img
- Advertisement -
- Advertisement -

ರಾಜಸ್ಥಾನ: ಪ್ರೀತಿ ಅನ್ನೋ ಮಾಯಾಂಗನೆ ಯಾರನ್ನು ಬಿಟ್ಟಿದ್ದಾಳೆ ಹೇಳಿ… ಎಂತಹವರಿಗಾದ್ರೂ ಒಂದು ಕ್ಷಣಕ್ಕಾದ್ರೂ ಪ್ರೀತಿ ಹುಟ್ಟಿಯೇ ಇರುತ್ತೆ. ಆದರೆ ಇವತ್ತು ನಾವು ನಿಮಗೆ ಹೇಳ್ತಿರೋ ಪ್ರೇಮಕಥೆಯ ರೀತಿ ಯಾರ ಲೈಫ್ ನಲ್ಲಿ ನಡೆದಿರೋದಕ್ಕೆ ಸಾಧ್ಯಾನೇ ಇಲ್ಲ. ಈ ಸ್ಟೋರಿ ಓದಿದ ಮೇಲೆ ನಿಮ್ಗೆ ಅಯ್ಯೋ ಹಿಂಗೆಲ್ಲಾ ಆಗುತ್ತಾ ಅಂತಾ ಅನ್ನಿಸದೇ ಇರಲ್ಲ.

ಹೌದು.. ಇವತ್ತು ನಾವು ಹೇಳ್ತಿರೋ ಈ ಸ್ಟೋರಿ ಕಥಾನಾಯಕ ವಯಸ್ಸು ಈಗ 82 ವರ್ಷ. ಆತನ ಊರು ರಾಜಸ್ಥಾನದ ಜೈಸಲ್ಮೇರ್​ ಜಿಲ್ಲೆಯ ಹೃದಯಭಾಗದಲ್ಲಿ ಕುಧಾರ ಎಂಬ ಕುಗ್ರಾಮ. ದೇವಸ್ಥಾನದಲ್ಲಿ ದ್ವಾರಪಾಲಕನಾಗಿ ಕೆಲಸ ಮಾಡುತ್ತಿದ್ದ.  1970 ರಲ್ಲಿ ಆತನ ಜೀವನದಲ್ಲಿ ಬಹುತೇಕರ ಜೀವನದಲ್ಲಿ ನಡೆಯುವಂತಹ ಘಟನೆಯೊಂದು ನಡೆಯಿತು.

ಆಗ ಆತನಿಗೆ 30 ವರ್ಷ. ಆತ ಕೆಲಸ ಮಾಡುತ್ತಿದ್ದ  ದೇಗುಲಕ್ಕೆ ಪ್ರವಾಸಕ್ಕೆಂದು ಆಸ್ಟ್ರೇಲಿಯಾದ ಮರಿನಾ ಎಂಬಾಕೆ ಬಂದಿದ್ದಳು. ದ್ವಾರಪಾಲಕನಾಗಿದ್ದ ಆತ ಆಕೆಯನ್ನು ಒಂಟೆ ಸವಾರಿ ಮಾಡಲು ಕರೆದುಕೊಂಡು ಹೋಗಿದ್ದಾನೆ.ಐದು ದಿನಗಳ ಮಟ್ಟಿಗೆ ಪ್ರವಾಸಕ್ಕೆ ಬಂದಿದ್ದ ಮರೀನಾ, ಒಂಟೆ ಸವಾರಿ ಮಾಡುವಾಗ ಈ ಆತನನ್ನು ಪ್ರೀತಿಸಿಬಿಟ್ಟಿದ್ದಾಳೆ. ಆತನಿಗೂ ಆಕೆಯ ಮೇಲೆ ವ್ಯಾಮೋಹ ಹುಟ್ಟಿದೆ. ಅಲ್ಲಿಯೇ ಆಕೆ ಐ ಲವ್​ ಯೂ ಎಂದುಬಿಟ್ಟಿದ್ದಾಳೆ. ಒಂಟೆ ಸವಾರಿ ಮೂಲಕ ಶುರುವಾದ ಈ ಪ್ರೀತಿ ಐದು ದಿನಗಳವರೆಗೆ ಮುಂದುವರೆದಿದೆ.

ನಂತರ ಮರೀನಾ ತನ್ನ ದೇಶಕ್ಕೆ ವಾಪಸಾಗಬೇಕಿತ್ತು. ವಾಪಸಾದ ಬಳಿಕ ಈ ದ್ವಾರಪಾಲಕನ ಪ್ರೀತಿಯನ್ನು ಆಕೆ ಮರೆಯಲಿಲ್ಲ. ಅಲ್ಲಿ ಹೋದ ಮೇಲೆಯೂ ಪ್ರೇಮ ಸಂಭಾಷಣೆ ಪತ್ರದ ಮೂಲಕ ಮುಂದುವರೆಸಿದ್ದಾಳೆ. ಮಾತ್ರವಲ್ಲದೇ ತನ್ನ ಪ್ರಿಯಕರನನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಂಡಿದ್ದಾಳೆ.

70ರ ದಶಕದಲ್ಲಿಯೇ ಈ ಯುವಕ ಹೇಗೇಗೋ 30 ಸಾವಿರ ರೂಪಾಯಿಗಳನ್ನ ಹೊಂದಿಸಿ ಆಸ್ಟ್ರೇಲಿಯಾಕ್ಕೆ ಹೋಗಿ ಆಕೆಯ ಜತೆಯಲ್ಲಿ ಮೂರು ತಿಂಗಳು ಉಳಿದಿದ್ದಾನೆ. ನಂತರ ಇಬ್ಬರ ಸ್ನೇಹ ಸಂಬಂಧ ಬಹಳ ಗಾಢವಾಗಿದ್ದರೂ ಈ ಯುವಕನಿಗೆ ವಾಪಸ್​ ತವರಿಗೆ ಬರಲೇಬೇಕಿತ್ತು. ನಾನು ನನ್ನ ತಾಯ್ನಾಡನ್ನ ಬಿಟ್ಟು ಆಸ್ಟ್ರೇಲಿಯಾದಲ್ಲಿ ಶಾಶ್ವತವಾಗಿ ನೆಲಸಲು ಸಿದ್ಧನಿರಲಿಲ್ಲ. ಹೀಗಾಗಿ ನಾನಿದನ್ನು ಆಕೆಯ ಬಳಿ ಹೇಳಿದೆ. ಆಕೆ ನನ್ನನ್ನ ಬಿಟ್ಟ ದಿನ ಸಿಕ್ಕಾಪಟ್ಟೆ ಅತ್ತಿದ್ದಳು ಎಂದು ಅಂದಿನ ದಿನಗಳನ್ನು ಈಗ  ನೆನಪಿಸಿಕೊಳ್ಳುತ್ತಾರೆ.

ಅಲ್ಲಿಂದ ಭಾರತಕ್ಕೆ ವಾಪಸ್ಸಾದ ಮೇಲೆ ಪರಿಸ್ಥಿತಿ ಏನೇನೋ ಆಗಿ ಇಬ್ಬರ ಸಂಪರ್ಕ ನಿಂತುಹೋಗುತ್ತದೆ. ಈ ನಡುವೆ ಈ ಯುವಕನ ಮದುವೆಯಾಗಿ ಮಕ್ಕಳೂ ಆಗಿದ್ದಾರೆ. ಹೀಗೆ 50 ವರ್ಷ ಕಳೆದ ಮೇಲೆ ಆ ಯುವಕನಿಗೆ ಈಗ 82 ವರ್ಷ ವಯಸ್ಸು. ಮಕ್ಕಳು, ಮೊಮ್ಮಕ್ಕಳನ್ನು ಕಂಡು ತನ್ನ ಪ್ರೇಮಿಯನ್ನು ಸಂಪೂರ್ಣ ಮರೆತ ಬೆನ್ನಲ್ಲೇ, ಇದೀಗ ಆ ಯುವತಿ (ಈಗ ಅಜ್ಜಿ) ಮತ್ತೆ ಪ್ರತ್ಯಕ್ಷಳಾಗಿದ್ದಾಳೆ!

50 ವರ್ಷಗಳಾದರೂ ಈ ಪ್ರೇಮಿಯ ನೆನಪಿನಲ್ಲಿಯೇ ಇದ್ದ ಯುವತಿ ಮದುವೆಯಾಗಿಲ್ಲ. ಪತ್ರ ಬರೆದಿರುವ ಆಕೆ ತನ್ನ ಪ್ರೀತಿ ಅಂಕುರಿಸಿದ ದಿನಗಳನ್ನು ನೆನಪಿಸಿಕೊಂಡಿದ್ದಾಳಂತೆ. ಇದನ್ನು ನೋಡಿ 82 ವರ್ಷದ ಈ ಅಜ್ಜಿ ಪುಳಕಿನತನಾಗಿದ್ದು, ಆಕೆಯನ್ನು ನೋಡಲು ಹಂಬಲಿಸುತ್ತಾನೆ. ನನ್ನ ಮೊದಲ ಪ್ರೀತಿಯ ಪತ್ರ ನೋಡಿ ನಾನು 20 ವರ್ಷದವನಂತೆ ಉತ್ಸಾಹಭರಿತನಾಗಿದ್ದೇನೆ. ಆಕೆಯನ್ನು ನೋಡಲು ಕಾತರನಾಗಿದ್ದೇನೆ ಎಂದು ಪತ್ರವನ್ನು ತೋರಿಸುತ್ತಾ ಹೇಳಿಕೊಂಡಿದ್ದಾನೆ.

ಪ್ರೀತಿಗೆ ಸಾವಿಲ್ಲ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಉದಾಹರಣೆ ಇನ್ನೇನಿದೆ ಹೇಳಿ.. 50 ವರ್ಷಗಳ ಬಳಿಕ ಪ್ರೇಮಿಗಳಿಬ್ಬರೂ ಒಂದಾಗುತ್ತಿದ್ದ ಆ ಕ್ಷಣಕ್ಕಾಗಿ ಇಬ್ಬರೂ ಉಸಿರು ಹಿಡಿದು ಕಾಯುತ್ತಿದ್ದಾರೆ.

- Advertisement -
spot_img

Latest News

error: Content is protected !!