- Advertisement -
![]()
- Advertisement -
ಸುರತ್ಕಲ್: ಇಲ್ಲಿನ ಎಂಆರ್‌ಪಿಎಲ್ ಮೂರನೇ ಹಂತದ ಪವರ್ ಪ್ಲಾಂಟ್‌ನ ಚಿಮಿನಿ ಘಟಕದಲ್ಲಿ ಸೋಮವಾರ ಸಂಜೆ ನಡೆದ ಭೀಕರ ಅವಘಡವೊಂದರಲ್ಲಿ ಉತ್ತರ ಪ್ರದೇಶದ ಲಕ್ನೋ ಮೂಲದ ಕಾರ್ಮಿಕ ಸೂರಜ್ (29) ಮೃತಪಟ್ಟಿದ್ದಾರೆ.
ಸುಮಾರು 130 ಅಡಿ ಎತ್ತರದಲ್ಲಿ ಕಬ್ಬಿಣದ ರಾಡ್‌ಗಳನ್ನು ಜೋಡಿಸಿ ಪೈಂಟಿಂಗ್ ಕೆಲಸ ಮುಗಿಸಿದ ಬಳಿಕ, ಸಂಜೆ 7 ಗಂಟೆಯ ಸುಮಾರಿಗೆ ಕಾರ್ಮಿಕರು ಹಗ್ಗದ ಸಹಾಯದಿಂದ ಆ ರಾಡ್‌ಗಳನ್ನು ಕೆಳಗೆ ಇಳಿಸುತ್ತಿದ್ದರು. ಈ ವೇಳೆ ಕೆಳಗಿನಿಂದ ಹಗ್ಗ ಬಿಡುತ್ತಿದ್ದವರ ಕೈಯಿಂದ ಅದು ಆಕಸ್ಮಿಕವಾಗಿ ಜಾರಿದ್ದು, ಆ ರಭಸಕ್ಕೆ ಹಗ್ಗವು ಸೂರಜ್ ಅವರ ಕಾಲಿಗೆ ಸಿಲುಕಿ ಅವರು ಮೇಲಕ್ಕೆ ಚಿಮ್ಮಲ್ಪಟ್ಟಿದ್ದಾರೆ. ಇದರಿಂದಾಗಿ ಅವರ ದೇಹಕ್ಕೆ ತೀವ್ರ ಸ್ವರೂಪದ ಆಂತರಿಕ ಗಾಯಗಳಾಗಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.
- Advertisement -


