Sunday, May 5, 2024
Homeಕರಾವಳಿಕಾಸರಗೋಡು: ಕಲ್ಲಿನ ಕ್ವಾರೆಗೆ ಸಿಡಿಲು ಬಡಿದು ಕಾರ್ಮಿಕ ಸಾವು

ಕಾಸರಗೋಡು: ಕಲ್ಲಿನ ಕ್ವಾರೆಗೆ ಸಿಡಿಲು ಬಡಿದು ಕಾರ್ಮಿಕ ಸಾವು

spot_img
- Advertisement -
- Advertisement -

ಕಾಸರಗೋಡು: ಸಿಡಿಲು ಬಡಿದು ಕಗ್ಗಲ್ಲು ಕ್ವಾರೆಯಲ್ಲಿ ಉಂಟಾದ ಸ್ಪೋಟದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ ಘಟನೆ ವೆಳ್ಳರಿಕುಂಡು ತಾಲೂಕಿನ ತಾಯನ್ನೂರು ಕೋಳಿಯಾರು ಎಂಬಲ್ಲಿ ನಡೆದಿದೆ ,

ರಮೇಶ್(45) ಘಟನೆಯಲ್ಲಿಸಾವನ್ನಪ್ಪಿದ ವ್ಯಕ್ತಿ. ಪ್ರಭಾಕರ ಮತ್ತು ಸುಮಾ ಗಂಭೀರ ಗಾಯಗೊಂಡಿದ್ದಾರೆ. ಮೂವರು ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಭಾರೀ ಗುಡುಗು ಮಿಂಚು ಸಹಿತ ಮಳೆ ಸುರಿದಿದ್ದು, ಈ ಸಂದರ್ಭದಲ್ಲಿ ಕೋರೆಗೆ ಸಿಡಿಲು ಬಡಿದಿದ್ದು, ಅಲ್ಲಿದ್ದ ಸ್ಪೋಟಕ ಸಿಡಿದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಗಂಭೀರ ಗಾಯಗೊಂಡ ಮೂವರನ್ನು ಸಮೀಪದ ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ರಮೇಶ್ ಮೃತಪಟ್ಟಿದ್ದಾರೆ. ಅಂಬಲತ್ತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!