Tuesday, May 7, 2024
Homeಕ್ರೀಡೆಟೋಕಿಯೋ ಒಲಿಂಪಿಕ್ಸ್ : ಕ್ವಾರ್ಟರ್ ಫೈನಲ್ ನಲ್ಲಿ ಮಹಿಳಾ ಹಾಕಿ ತಂಡಕ್ಕೆ ರೋಚಕ ಗೆಲುವು;...

ಟೋಕಿಯೋ ಒಲಿಂಪಿಕ್ಸ್ : ಕ್ವಾರ್ಟರ್ ಫೈನಲ್ ನಲ್ಲಿ ಮಹಿಳಾ ಹಾಕಿ ತಂಡಕ್ಕೆ ರೋಚಕ ಗೆಲುವು; ಸೆಮಿ ಫೈನಲ್ ಗೆ ಎಂಟ್ರಿ!!

spot_img
- Advertisement -
- Advertisement -

ಟೋಕಿಯೋ:ಟೋಕಿಯೊ : ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ 1-0 ಅಂತರದ ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದ್ದು, ಈ ಮೂಲಕ ಭಾರತದ ಮಹಿಳಾ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ತೀವ್ರ ಪೈಪೋಟಿಯಿಂದ ಸಾಗಿದ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದ್ರೆ ನಂತರದ ಸೆಕೆಂಡ್ ಹಾಫ್​ನಲ್ಲಿ ಭಾರತದ ಪರ ಗುರ್ಜಿತ್ ​ಕೌರ್​ ಗೋಲು ಬಾರಿಸಿ, ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಮುನ್ನಡೆ ಬಳಿಕ ಸಮಯೋಜಿತ ಆಟ ಪ್ರದರ್ಶಿಸಿದ ಭಾರತ ವನಿತೆಯರು, ಬಲಿಷ್ಠ ಆಸ್ಟ್ರೇಲಿಯಾ ಎದುರು ಸಂಪೂರ್ಣ ಮೇಲುಗೈ ಸಾಧಿಸಿದರು. ಅಂತಿಮ ಕ್ಷಣದವರೆಗೆ ಕುತೂಹಲ ಕಾಯ್ದಿರಿಸಿದ್ದ ಪಂದ್ಯವನ್ನ 1-0 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದ ಭಾರತ, ಸೆಮಿಫೈನಲ್​ಗೆ ಲಗ್ಗೆಯಿಟ್ಟಿತು. ಆ ಮೂಲಕ ಮೊದಲ ಬಾರಿಗೆ ಒಲಿಂಪಿಕ್ಸ್​ ಸೆಮೀಸ್​ ಪ್ರವೇಶಿಸಿದ ಸಾಧನೆ ಮಾಡಿತು.

- Advertisement -
spot_img

Latest News

error: Content is protected !!