Sunday, May 19, 2024
Homeಕರಾವಳಿಉಡುಪಿಪೆನ್ನು ಕ್ಯಾಮೆರಾ ಹಿಡಿಯಲು ಸೈ ನೇಜಿ ನಾಟಿಗೂ ಸೈ ; ಹಾರಾಡಿ ಬಳಿ ಉಡುಪಿ ಪತ್ರಕರ್ತರಿಂದ...

ಪೆನ್ನು ಕ್ಯಾಮೆರಾ ಹಿಡಿಯಲು ಸೈ ನೇಜಿ ನಾಟಿಗೂ ಸೈ ; ಹಾರಾಡಿ ಬಳಿ ಉಡುಪಿ ಪತ್ರಕರ್ತರಿಂದ ನಾಟಿ ಕಾರ್ಯ

spot_img
- Advertisement -
- Advertisement -

ಉಡುಪಿ: ಅಗಸ್ಟ್ 1ರ ಭಾನುವಾರ ಹಾರಾಡಿ ಗ್ರಾಮದ ಹೊನ್ನಾಳ ಕಂಬಳಗದ್ದೆ ಮನೆ ಬಳಿಯ ಹಡಿಲು ಭೂಮಿಯಲ್ಲಿ ಪತ್ರಕರ್ತರೆಲ್ಲ ಸೇರಿ ಗದ್ದೆಗಿಳಿದು ನೇಜಿ ನೆಟ್ಟು ಸಂಭ್ರಮಿಸಿದ ದೃಶ್ಯ ಕಂಡು ಬಂದಿದೆ.

ಉಡುಪಿ ಶಾಸಕ ರಘುಪತಿ ಭಟ್‌ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕೇದಾರೋತ್ಥಾನ ಟ್ರಸ್ಟ್, ಬ್ರಹ್ಮಾವರ ಸಮೀಪದ ಹಾರಾಡಿ ಹೊನ್ನಾಳ ಕಂಬಳಗದ್ದೆ ಮನೆ ಬಳಿಯ ಹಡಿಲು ಭೂಮಿ ಕೃಷಿ ನಾಟಿ ಸಮಾರೋಪದಲ್ಲಿ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಕೈಜೋಡಿಸಿತ್ತು.

ಕೇದಾರೋತ್ಥಾನ ಟ್ರಸ್ಟ್ ಮೂಲಕ “ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಹಾರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10 ಎಕರೆ ಹಡಿಲು ಭೂಮಿಯನ್ನು ಸಾವಯವ ಕೃಷಿಯಲ್ಲಿ ಭಾಗವಹಿಸಿದರು. ಬೆಳಿಗ್ಗಿನಿಂದ ಆರಂಭವಾದ ನಾಟಿ ಕಾರ್ಯ ಮಧ್ಯಾಹ್ನದ ತನಕ ನಡೆದಿದ್ದು ಪತ್ರಕರ್ತರು ಅತೀ ಉತ್ಸಾಹದಿಂದ ನಾಟಿ ಮಾಡಿ ಸಂಭ್ರಮಿಸಿದರು.

ಸಂತೋಷ್ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ, ಪುಣೆ, ಪ್ರಕಾಶ್ ಚಂದ್ರ ಶೆಟ್ಟಿ ಅಧ್ಯಕ್ಷರು, ವ್ಯವಸ್ಥಾಪಕ ಟ್ರಸ್ಟಿ ಜಿ.ಎಂ ಎಜುಕೇಶನ್ ಟ್ರಸ್ಟ್, ಬ್ರಹ್ಮಾವರ, ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಅಜಿತ್ ಆರಾಡಿ ಕೃಷಿಕರು ಮತ್ತು ವರದಿಗಾರರು ವಿಜಯ ಕರ್ನಾಟಕ ಉಡುಪಿ ಜಿಲ್ಲೆ ಇವರೊಂದಿಗೆ ಶಾಸಕ ಕೆ. ರಘುಪತಿ ಭಟ್ ಅವರು ಭೂ ಮಾತೆಗೆ ಹಾಲನ್ನು ಅರ್ಪಿಸಿ ನೇಜಿ ನೀಡುವ ಮೂಲಕ ಯಂತ್ರ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಸ್ಥಳೀಯರೊಂದಿಗೆ ಸೇರಿ ನೇಜಿ ನೆಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಅಜಿತ್ ಆರಾಡಿ ಮಾತನಾಡಿ, ” ಕೃಷಿಯಿಂದ ಯಾವುದೇ ನಷ್ಟವಿಲ್ಲ. ಆದರೆ ಅನಿವಾರ್ಯ ಕಾರಣಗಳಿಂದ ಹಡಿಲು ಬಿಡಲಾಗುತ್ತಿದೆ. ನಮ್ಮಲ್ಲಿ ಭತ್ತ ಸಂಗ್ರಹಕ್ಕಾಗಿ ತಿರಿ ಕಟ್ಟುವ ಪದ್ದತಿ ಇಲ್ಲ. ಹಾಗಾಗಿ ಭತ್ತಕ್ಕೆ ದರ ಕಡಿಮೆ ಇದೆ 10 ರಿಂದ 15 ರೂಪಾಯಿ ಬೆಲೆ ಸಿಗುತ್ತೆ. ಇದರಿಂದ ಆರ್ಥಿಕ ನಷ್ಟ ಆಗುತ್ತದೆ. ಅಕ್ಕಿಗೆ ಬೆಲೆ 50-55 ರಷ್ಟಾದರೂ ಸಿಗಬೇಕು, ಎಂದರು

ಸರಿಯಾಗಿ ನಿರ್ವಹಿಸಿದಲ್ಲಿ ಕೃಷಿ ಲಾಭದಾಯಕ ಉದ್ಯೋಗ. ಆದರೆ, ಮೀನುಗಾರಿಕೆಗೆ ನೀಡುವಂತೆ ಕೃಷಿಕರಿಗೂ ಸರಕಾರ ಪ್ರೋತ್ಸಾಹ ನೀಡಬೇಕು. ಸುಲಭ ದರದಲ್ಲಿ ಗೊಬ್ಬರ, ಬಿತ್ತನೆ ಬೀಜ, ಯಾಂತ್ರೀಕರಣಕ್ಕೆ ಸಹಕಾರ, ಕಲ್ಪಿಸಬೇಕು ಎಂದು ಅಜಿತ್ ಹೇಳಿದರು.

ಹಡಿಲು ಭೂಮಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಸಹಕರಿಸಿದ ಸಂಘ – ಸಂಸ್ಥೆಯವರಿಗೆ, ಭೂ ಮಾಲಕರಿಗೆ, ಸ್ಥಳೀಯರಿಗೆ ಶಾಸಕರಾದ ಕೆ. ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಜಯಂತಿ ಪೂಜಾರಿ, ಸ್ಥಳೀಯರಾದ ಎ. ಬಾಲಕೃಷ್ಣ ಶೆಟ್ಟಿ, ಅಬು ಸಾಹೇಬ್, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಡಾ. ಶಂಕರ್ ಹಾಗೂ ಹಾರಾಡಿ ಗ್ರಾಮ ಪಂಚಾಯತ್ ಸದಸ್ಯರು, ಭೂ ಮಾಲಕರು, ಸ್ಥಳೀಯ ಕೃಷಿಕರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!