Saturday, June 6, 2026
Homeತಾಜಾ ಸುದ್ದಿಕಾರ್ಕಳದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ತಾಯಿ ಮಗು ಸಾವು

ಕಾರ್ಕಳದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ತಾಯಿ ಮಗು ಸಾವು

- Advertisement -
- Advertisement -

ಕಾರ್ಕಳ: ತಾಯಿ ಮತ್ತು ಮಗು ಅಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನ ಕಾರ್ಕಳದ ಕೆರ್ವಾಶೆ ಗ್ರಾಮದ ಮಡಿವಾಳ ಕಟ್ಟೆಕೆರೆ ಎಂಬಲ್ಲಿ ನಡೆದಿದೆ.

ಮೃತರನ್ನು ಕೆರ್ವಾಶೆ ಗ್ರಾಮದ ಕಡ್ಪಾಲ್ ನಿವಾಸಿ ಸೌಮ್ಯ (27) ಮತ್ತು ಅವರ ಮಗ ಆರೂಷ್ (3) ಎಂದು ಗುರುತಿಸಲಾಗಿದೆ. ಕಳೆದ ಏಳು ದಿನಗಳಿಂದ ಸೌಮ್ಯ ಕೆರ್ವಾಶೆಯ ಶಾಲೆಯ ಬಳಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದರು. ಮೊನ್ನೆ ಟೈಲರಿಂಗ್ ಕ್ಲಾಸ್‌ಗೆ ತನ್ನ ಜೊತೆ ಮಗನನ್ನು ಕರೆದುಕೊಂಡು ಹೋಗಿದ್ದರು.

ಅಲ್ಲಿಂದ ಕಟ್ಟೆ ಕೆರೆಯ ಬದಿಯಲ್ಲಿರುವ ದಾರಿ ಮೂಲಕ ವಾಪಾಸ್ಸು ಮನೆಗೆ ಬರುತ್ತಿದ್ದ ಸೌಮ್ಯ ಹಾಗೂ ಆರೂಷ್ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸಂಜೆಯಾದರೂ ಮನೆಗೆ ಬಾರದ ಇವರಿಬ್ಬರನ್ನು ಹುಡುಕಾಡಿದಾಗ ಇವರಿಬ್ಬರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!