Thursday, June 4, 2026
Homeಕರಾವಳಿಉಡುಪಿಮಲ್ಪೆ: ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಯುವತಿ ಶವ ಪತ್ತೆ

ಮಲ್ಪೆ: ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಯುವತಿ ಶವ ಪತ್ತೆ

- Advertisement -
- Advertisement -

ಉಡುಪಿ: ನಿನ್ನೆ ಮಲ್ಪೆಯಲ್ಲಿ ಸಮುದ್ರ ಪಾಲಾಗಿದ್ದ ಯುವತಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ. ಉಡುಪಿಯ ಮಲ್ಪೆಯಲ್ಲಿ ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದ ಕೊಡಗು ಮೂಲದ ದಶಮಿ ಶವ ಪತ್ತೆಯಾಗಿದೆ.‌

ಪ್ರವಾಸಕ್ಕೆ ಸ್ನೇಹಿತರೊಂದಿಗೆ ಉಡುಪಿಗೆ ಬಂದಿದ್ದ ದಶಮಿ ಶವ ಇಂದು ಬೆಳಗ್ಗೆ ಮಲ್ಪೆ ಸೀ ವಾಕ್‌ನ ಬಳಿ ಪತ್ತೆಯಾಗಿದೆ. ನಿನ್ನೆ ಸಂಜೆ ವೇಳೆ ಮಲ್ಪೆ ಸಮುದ್ರದಲ್ಲಿ ಲೈಫ್ ಗಾರ್ಡ್‌ಗಳ ಸೂಚನೆ ಲೆಕ್ಕಿಸದೇ ಅಲೆಗಳ ಜೊತೆಗೆ ಆಟವಾಡುತ್ತಿದ್ದರು. ಈ ವೇಳೆ ಅಲೆಗಳ ರಭಸಕ್ಕೆ ನಾಲ್ಕು ಮಂದಿ ಕೊಚ್ಚಿ ಹೋಗಿದ್ದರು.

ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ದಶಮಿ ನಾಪತ್ತೆ ಆಗಿದ್ದಳು. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!