Friday, June 5, 2026
Homeಕರಾವಳಿಮಂಗಳೂರು : ಸುರತ್ಕಲ್ ನಲ್ಲಿ ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು : ಸುರತ್ಕಲ್ ನಲ್ಲಿ ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು  ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುರತ್ಕಲ್ ನ ಕೋಟೆಕಾರು ಸಮೀಪ ಮಾಡೂರು ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.  

ಮಾಡೂರು ನಿವಾಸಿ ಚಂದ್ರಶೇಖರ -ಗಿರಿಜ ಅವರ ಪುತ್ರಿ ದಿವ್ಯ (26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಜ.21 ರಂದು ದಿವ್ಯ ತನ್ನ ಪತಿಯೊಂದಿಗೆ ನೆರೆಮನೆಯ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅಲ್ಲಿ ಪತಿ ಪತ್ನಿ ನಡುವೆ ಮನಸ್ತಾಪವಾಗಿರುವುದರಿಂದ ದಿವ್ಯ ಒಬ್ಬರೆ ಮನೆಗೆ ಹಿಂತಿರುಗಿದ್ದಾರೆ. ಬಳಿಕ ಜ.22 ರಂದು ಸಂಜೆ ಮನೆಯ ಬೆಡ್‌ ರೂಂನಲ್ಲಿ ದಿವ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಬಳಿಕ ತಾಯಿ ಗಿರಿಜಾ ಕೂಡಲೇ ದಿವ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನುದಿವ್ಯ ಒಂದೂವರೆ ವರ್ಷದ ಹಿಂದೆ ಹರೀಶ್‌ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಕುರಿತು ದಿವ್ಯ ಅವರ ತಾಯಿ ಗಿರಿಜಾ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!