Thursday, June 4, 2026
Homeಪ್ರಮುಖ-ಸುದ್ದಿಸ್ಯಾಂಡಲ್ ವುಡ್ ಗೆ ಮತ್ತೊಂದು ಅಘಾತ; ಖ್ಯಾತ ನಟ ನಿಧನ

ಸ್ಯಾಂಡಲ್ ವುಡ್ ಗೆ ಮತ್ತೊಂದು ಅಘಾತ; ಖ್ಯಾತ ನಟ ನಿಧನ

- Advertisement -
- Advertisement -

ಬೆಂಗಳೂರು; ಸ್ಯಾಂಡಲ್ ವುಡ್ ಇದೀಗ ಮತ್ತೊಮ್ಮೆ ಆಘಾತ ಎದುರಾಗಿದೆ. 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಲಕ್ಷ್ಮಣ್ (74) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಲಕ್ಷ್ಮಣ್ ಭಾನುವಾರ ರಾತ್ರಿ (ನಿನ್ನೆ)  ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮುಂಜಾನೆ 3.30 ಸುಮಾರಿಗೆ ಅವರನ್ನು ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇಸಿಜಿ ಮಾಡಿ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಆ ಬಳಿಕ  ಅವರಿಗೆ ಹೃದಯಾಘಾತವಾಗಿದೆ. ಇದೀಗ ಅವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.

ಲಕ್ಷ್ಮಣ್ ಅವರು ಪೋಷಕ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರು. ವೃತ್ತಿ ಜೀವನದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಲಕ್ಷ್ಮಣ್ ಬಣ್ಣ ಹಚ್ಚಿದ್ದರು. ‘ಒಲವಿನ ಉಡುಗೊರೆ’, ‘ಸಾಂಗ್ಲಿಯಾನ’ ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಅಂಬರೀಷ್​, ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಕನ್ನಡದ ದಿಗ್ಗಜರ ಜೊತೆ ಕಾಣಿಸಿಕೊಂಡಿದ್ದರು.

- Advertisement -

Latest News

error: Content is protected !!