Friday, June 5, 2026
Homeಕರಾವಳಿಉಡುಪಿಉಡುಪಿ: ಚಿರತೆ ದಾಳಿಗೆ ಕೋಣ ಬಲಿ

ಉಡುಪಿ: ಚಿರತೆ ದಾಳಿಗೆ ಕೋಣ ಬಲಿ

- Advertisement -
- Advertisement -

ಉಡುಪಿ: ಚಿರತೆ ದಾಳಿಗೆ ಕೋಣ ಬಲಿಯಾಗಿರುವ ಘಟನೆ ಉಡುಪಿಯ ಪರ್ಕಳದ  ಹೆರ್ಗದ ಬಳಿ ಇರುವ ಪ್ರಸಾದ್ ಕಾಲೋನಿಯ 5ನೇ ಕ್ರಾಸ್ ನಲ್ಲಿ ನಡೆದಿದೆ.

ನಾಲ್ಕೈದು ವರ್ಷದ ಕೋಣ ಚಿರತೆಗೆ ಆಹಾರವಾಗಿದೆ. ನಿನ್ನೆ ಹಟ್ಟಿಗೆ ಕೋಣ ಬಾರದಿದ್ದರಿಂದ ಅನುಮಾನಗೊಂಡ  ಮಾಲೀಕ ಕರುಣಾಕರ ಪೂಜಾರಿ ಅವರು ಸುತ್ತಮುತ್ತ ಹುಡುಕಿದಾಗ ಗದ್ದೆಯಲ್ಲಿ ಕೋಣ ಶವವಾಗಿ ಪತ್ತೆಯಾಗಿದೆ

ಈ ಭಾಗದಲ್ಲಿ ಹಿಂದೆ ಶಿಕ್ಷಕ ಕೆದ್ಲಾಯರ ಮನೆಯ ಸಾಕು ನಾಯಿಯನ್ನು ಇತ್ತೀಚೆಗೆ ಚಿರತೆ ಬೇಟೆಯಾಡಿತ್ತು,  ಇದೀಗ ಮತ್ತೆ ಕೋಣ ಚಿರತೆಗೆ ಬಲಿಯಾಗಿರೋದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

- Advertisement -

Latest News

error: Content is protected !!