Friday, June 5, 2026
Homeತಾಜಾ ಸುದ್ದಿಆರೋಗ್ಯ ಸಚಿವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮೈಮೇಲೆ ದೇವರು ಬಂದಂತೆ ವರ್ತಿಸಿದ ಮಹಿಳೆ!

ಆರೋಗ್ಯ ಸಚಿವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮೈಮೇಲೆ ದೇವರು ಬಂದಂತೆ ವರ್ತಿಸಿದ ಮಹಿಳೆ!

- Advertisement -
- Advertisement -

ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯ ಮೈಮೇಲೆ ದೇವರು ಬಂದ ಘಟನೆ ‌ನಡೆದಿದೆ. ಓಂಶಕ್ತಿ ದೇವತೆ ಮೈಮೇಲೆ ಬಂದಂತೆ ಮಹಿಳೆ ಕೂಗಾಡಿದ್ದು, ಓಂ ಶಕ್ತಿ ದೇವಸ್ಥಾನ ಕಟ್ಟಿಸಿಕೊಡುವಂತೆ ಹೇಳಿದ್ದಾಳೆ.

ಕಿರುಚಾಡುತ್ತಾ ನಾಲಗೆ ಹೊರ ಹಾಕುತ್ತಾ ಸಚಿವರ ಬಳಿಗೆ ಹೋಗಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ತಡೆದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮುಷ್ಟೂರು ಗ್ರಾಮದಲ್ಲಿ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಆದರೆ ಆರೋಗ್ಯ ಸಚಿವರು ಇದ್ಯಾವುದನ್ನೂ ಪರಿಗಣಿಸದೇ ಕಾರ್ಯಕ್ರಮ ಮುಗಿಸಿ ತೆರಳಿದ್ದಾರೆ.

- Advertisement -

Latest News

error: Content is protected !!