Thursday, May 2, 2024
Homeಕೊಡಗುಫೇಸ್ ಬುಕ್ ನಿಂದ ನಿವೃತ್ತ ಯೋಧನಿಗೆ ವಿವಾಹಿತ ಮಹಿಳೆಯ ಕಿರುಕುಳ; ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ...

ಫೇಸ್ ಬುಕ್ ನಿಂದ ನಿವೃತ್ತ ಯೋಧನಿಗೆ ವಿವಾಹಿತ ಮಹಿಳೆಯ ಕಿರುಕುಳ; ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಯೋಧ

spot_img
- Advertisement -
- Advertisement -

ಕೊಡಗು: ನಿವೃತ್ತ ಯೋಧರೊಬ್ಬರು ಮಹಿಳೆಯ ಕಿರುಕಳಕ್ಕೆ ನೊಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. 

ಮೃತ ಯೋಧ ಸಂದೇಶ್ ಉಕ್ಕುಡ ನಿವಾಸಿ. ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಯೊಬ್ಬಳು ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿ ಸಂದೇಶ್ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂದೇಶ್ ಪತ್ನಿ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಪತ್ನಿ ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಸಂದೇಶ್‌ಗಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ಅವರ ಮನೆಯ ಸಮೀಪದ ಪಂಪಿನ ಕೆರೆ ಬಳಿ ಸಂದೇಶ್ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಸಂದೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾದ ಸ್ಥಳದಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಡೆತ್ ನೋಟ್ ನಲ್ಲಿ ಸಂದೇಶ್, ‘ವಿವಾಹಿತ ಮಹಿಳೆ, ಆಕೆಯ ತಾಯಿ ಮತ್ತು ತಂಗಿ ಸೇರಿಕೊಂಡು ನನ್ನನ್ನು ಹನಿ ಟ್ರ್ಯಾಪ್‌ಗೆ ಬೀಳಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅವರು ಮೂವರು ನನ್ನ ಸಾವಿಗೆ ಕಾರಣ. ಇನ್ನು ಮಹಿಳೆಯ ಅನೈತಿಕ ಸಂಬಂಧಗಳು ನನಗೆ ತಿಳಿದ ಬಳಿಕ ಅವರೆಲ್ಲರೂ ನನ್ನನ್ನು ಫಾಲೋ ಮಾಡಲು, ಮೆಂಟಲ್ ಟಾರ್ಚರ್ ನೀಡಲು ಶುರು ಮಾಡಿದ್ದರು ಎಂದು ರೆಸಾರ್ಟ್ ಒಂದರ ಮಾಲೀಕ, ಒಬ್ಬಪೊಲೀಸ್ ಹಾಗೂ ಇಬ್ಬರು ಇತರರ ಹೆಸರನ್ನು ಸಂದೇಶ್ ಉಲ್ಲೇಖಿಸಿದ್ದಾರೆ. ನನ್ನ ಒಂದು ಕಾರು ಮತ್ತು ಎಲ್ಲ ಡಾಕ್ಯುಮೆಂಟ್ಸ್ ಆಕೆಯ ಮನೆಯಲ್ಲಿದೆ ಎಂದು ಸಂದೇಶ್ ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!