Monday, June 8, 2026
Homeಕರಾವಳಿಉಡುಪಿಉಡುಪಿ: ಟ್ರೇಡಿಂಗ್ ಹೆಸರಿನಲ್ಲಿ ಅಧಿಕ ಲಾಭದ ಆಸೆ ಹುಟ್ಟಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

ಉಡುಪಿ: ಟ್ರೇಡಿಂಗ್ ಹೆಸರಿನಲ್ಲಿ ಅಧಿಕ ಲಾಭದ ಆಸೆ ಹುಟ್ಟಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

- Advertisement -
- Advertisement -

ಉಡುಪಿ: ಟ್ರೇಡಿಂಗ್ ಹೆಸರಿನಲ್ಲಿ ಅಧಿಕ ಲಾಭದ ಆಸೆ ಹುಟ್ಟಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ದೀಪ್ತಿ ವಂಚನೆಗೊಳಗಾದ ಮಹಿಳೆ.

ದೀಪ್ತಿ (26) ಇವರನ್ನು ದಿನಾಂಕ 01/06/2025 ರಂದು ಟೆಲಿಗ್ರಾಂ ಆಪ್ ನಲ್ಲಿ ಯಾರೋ ಅಪರಿಚಿತರು K&K GROUP ಎಂಬ ಗ್ರೂಪ್ ಗೆ ಸೇರ್ಪಡೆ ಮಾಡಿ ಕೆಲವೊಂದು ಟಾಸ್ಕ್ ಗಳನ್ನು ನೀಡಿ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದಾಗಿ ಪಿರ್ಯಾದಿದಾರರನ್ನು ನಂಬಿಸಿದ್ದು, ಅದರಂತೆ ದೀಪ್ತಿ ಅಪರಿಚಿತರು ಸೂಚಿಸಿದ ವಿವಿಧ ಖಾತೆಗಳಿಗೆ ದಿನಾಂಕ 01/06/2025 ರಿಂದ ದಿನಾಂಕ 04/06/2025 ರ ವರೆಗೆ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 4,92,477/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಅದರೆ ಅಪರಿಚಿತ ವ್ಯಕ್ತಿಗಳು ಈ ತನಕ ದೀಪ್ತಿ ಅವರಿಗೆ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2025 ಕಲಂ: 66(ಸಿ),66(ಡಿ)ಐ.ಟಿ. ಆಕ್ಟ್ ಮತ್ತು 318(4)‌ ಬಿಎನ್‌ಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.‌

- Advertisement -

Latest News

error: Content is protected !!