Tuesday, June 30, 2026
Homeಪ್ರಮುಖ-ಸುದ್ದಿಮಂಗಳೂರು; ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ ಕರೆ ಪ್ರಕರಣಕ್ಕೆ ಟ್ವಿಸ್ಟ್; ಹುಸಿ ಬಾಂಬ್...

ಮಂಗಳೂರು; ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ ಕರೆ ಪ್ರಕರಣಕ್ಕೆ ಟ್ವಿಸ್ಟ್; ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ವಿದ್ಯಾರ್ಥಿನಿ ಅರೆಸ್ಟ್

- Advertisement -
- Advertisement -

ಮಂಗಳೂರು; ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ ಕರೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ವಿದ್ಯಾರ್ಥಿನಿಯನ್ನು ಅರೆಸ್ಟ್ ಮಾಡಲಾಗಿದೆ. ಅದೇ ಕಾಲೇಜಿನ ಪಿಜಿ ವಿಧ್ಯಾರ್ಥಿನಿ ಚಲಸಾನಿ ಮೋನಿಕಾ ಚೌಧರಿ ಬಂಧಿತ ಆರೋಪಿ

ಕಾಲೇಜಿನ ಸೆಮಿನಾರ್ ತಪ್ಪಿಸಲು ಚಲಸಾನಿ ಮೋನಿಕಾ ಚೌಧರಿ  ಹುಸಿ ಬಾಂಬ್ ಕರೆ ಮಾಡಿದ್ದಾಳೆ. ಅಚ್ಚರಿಯ ಸಂಗತಿ ಅಂದರೆ ಅರೆಸ್ಟ್ ಆಗಿರುವ ವಿಧ್ಯಾರ್ಥಿನಿಯೇ ಪೊಲೀಸರಿಗೆ ಬಾಂಬ್ ಬೆದರಿಕೆ ಕರೆ ಕುರಿತಂತೆ ದೂರು ನೀಡಿದ್ದಳು. ಜೂನ್ 4 ರಂದು ಬೆಳಿಗ್ಗೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಅನಾಮಿಕ ಕರೆಯೊಂದು ಬಂದಿದ್ದು. ಅದರಲ್ಲಿ ಆಸ್ಪತ್ರೆ ಹಾಗೂ ಕಾಲೇಜಿಗೆ ಬಾಂಬ್ ಇಡಲಾಗಿದೆ 11 ಗಂಟೆಯೊಳಗೆ ಆಸ್ಪತ್ರೆ ಹಾಗೂ ಕಾಲೇಜ್ ನ್ನು ಖಾಲಿ ಮಾಡಿ ಎಂದು 5 ಬಾರಿ ಬೆದರಿಕೆ ಒಡ್ಡಲಾಗಿತ್ತು,


ಈ ಬೆದರಿಕೆಯ ಬಗ್ಗೆ ದೂರು ಬಂದ ಮೇರೆಗೆ 25-30 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು. ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನ ದಳ ತಂಡದೊಂದಿಗೆ ಆಸ್ಪತ್ರೆಯ ಸಂಪೂರ್ಣ ಕಟ್ಟಡ, ಆಸ್ಪತ್ರೆಯ ವಾಹನ ಪಾರ್ಕಿಂಗ್ ಸ್ಥಳ ಹಾಗೂ ಆಸ್ಪತ್ರೆಯ ಸುತ್ತಮುತ್ತಲಿನ ಪರಿಸರವನ್ನು ನಿರಂತರವಾಗಿ 10 ಗಂಟೆಗಳ ಕಾಲ ಪರಿಶೀಲಿಸಿದಾಗ ಯಾವುದೇ ರೀತಿಯ ಬಾಂಬ್ ಪತ್ತೆಯಾಗಿರುದಿಲ್ಲ. ಬಾಂಬ್ ಬೆದರಿಕೆ ಕರೆ ಹಿನ್ನಲೆಯಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯವರು ಹಾಗೂ ರೋಗಿಗಳು ಬೆದರಿಕೆಯ ಬಗ್ಗೆ ತುಂಬ ಆತಂಕಕ್ಕೆ ಒಳಗಾಗಿ ಭಯಬೀತರಾಗಿದ್ದರು.

ಬಳಿಕ ಡಾ. ಚಲಸಾನಿ ಮೋನಿಕಾ ಚೌಧರಿ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋನ್ ಕರೆ ಬಗ್ಗೆ ದೂರು ನೀಡಿದ್ದರು. ಈ ಕುರಿತಂತೆ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು. ಸದರಿ ತಂಡದವರು ಆರೋಪಿ ಪತ್ತೆಗೆ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದಾಗ ತನಿಖೆಯಿಂದ ಯಾರು ಪೊಲೀಸ್ ರಿಗೆ ದೂರು ನೀಡಿದ್ದರೋ ಅವರೇ ಆರೋಪಿ ಎಂದು ತಿಳಿದು ಬಂದಿದೆ.


ಬಳಿಕ ವಿಧ್ಯಾರ್ಥಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಣಚೂರು ವೈಧ್ಯಕೀಯ ಕಾಲೇಜ್‌ನಲ್ಲಿ ಸ್ನಾತಕೋತರ ಪದವಿ ವ್ಯಾಸಂಗ ಮಾಡುತ್ತಿದ್ದು ಸದರಿ ದಿನಾಂಕದಂದು ಸಮಿನಾ‌ರ್  ನೀಡಬೇಕಾಗಿರುವುದರಿಂದ ಸಮಿನಾರ್ ತಪ್ಪಿಸುವ ಉದ್ದೇಶದಿಂದ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ವಿಧ್ಯಾರ್ಥಿನಿಯನ್ನು ಅರಸ್ಟ್ ಮಾಡಿರುವ ಪೊಲೀಸರು ಆಕೆಯ ಮೊಬೈಲ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!