Saturday, June 6, 2026
Homeತಾಜಾ ಸುದ್ದಿಪ್ರಿಯಕರನ ಲೈಂಗಿಕ ಆಸೆಗೆ ಮಗಳನ್ನೇ ಬಲಿ ಕೊಟ್ಟ ಪಾಪಿ ತಾಯಿ

ಪ್ರಿಯಕರನ ಲೈಂಗಿಕ ಆಸೆಗೆ ಮಗಳನ್ನೇ ಬಲಿ ಕೊಟ್ಟ ಪಾಪಿ ತಾಯಿ

- Advertisement -
- Advertisement -

ಚೆನ್ನೈ: ಹಿರಿಯರ ಮಾತಿನಂತೆ ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುವ ನಾಣ್ಣುಡಿ ಇದೆ. ಆದರೆ ಇಲ್ಲೊಬ್ಬ ತಾಯಿಯಿಂದ ಮಾನವ ಕುಲವೇ ತಲೆತಗ್ಗಿಸುವ ಘಟನೆಯೊಂದು ವರದಿಯಾಗಿದೆ. 

ಹೆತ್ತಾಕೆಯೇ ತನ್ನ ಪ್ರಿಯಕರನಿಗೋಸ್ಕರ ಮಗಳನ್ನು ಒಪ್ಪಿಸಿ, ಅತ್ಯಾಚಾರ ಮಾಡಲು ಅವಕಾಶ ಕೊಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದೀಗ ಆ ಬಾಲಕಿ ತಾಯಿಯ ಪ್ರಿಯಕರನಿಂದ ಗರ್ಭ ಧರಿಸಿ ಮಗುವನ್ನು ಹೆತ್ತಿದ್ದಾಳೆ. ಚೆನ್ನೈನ ಒಟ್ಟೇರಿ ಪ್ರದೇಶದ 40 ವರ್ಷದ ಮಹಿಳೆ ಈ ವಿಕೃತಿಯನ್ನು ಮಾಡಿದ್ದು, ಈಕೆ ಗಂಡನಿಂದ ಬೇರೆಯಾಗಿ 17 ವರ್ಷದ ಮಗಳ ಜತೆ ಇದ್ದಳು. ಅಲ್ಲಿಯೇ ಪುಲಿಯಂತೋಪೆಯ ಮುತ್ತುಕುಮಾರ್ ಎಂಬ 50 ವರ್ಷದ ವ್ಯಕ್ತಿಯ ಪರಿಚಯವಾಗಿ ಇಬ್ಬರ ನಡುವೆ ಕಾಮದಾಟ ಶುರುವಾಗಿದೆ. ಈ ಕಾಮುಕನ ಕಣ್ಣು ಮಹಿಳೆಯ ಮಗಳ ಮೇಲೆ ಬಿದ್ದಿದೆ.

ಕಳೆದೊಂದು ವರ್ಷದಿದ ಬಾಲಕಿಯ ಮೇಲೆ ಈತ ಅತ್ಯಾಚಾರ ಮಾಡುತ್ತಲೇ ಬಂದಿದ್ದಾನೆ. ಇದರಿಂದ ಬಾಲಕಿ ಗರ್ಭ ಧರಿಸಿದ್ದಳು. ಆಸ್ಪತ್ರೆಗೆ ಹೋದರೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಈ ತಾಯಿ ಬಾಲಕಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಳು. ಈಗ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಮಗುವಿಗೆ ಹುಷಾರಿಲ್ಲದ ಕಾರಣ ಚಿಕಿತ್ಸೆಗಾಗಿ ಕೇಂದ್ರಕ್ಕೆ ಹೋದಾಗ ಈ ಘಟನೆಯು ಬೆಳಕಿಗೆ ಬಂದಿರುತ್ತದೆ. ಆಧಾರ್ ಕಾರ್ಡ್ ಕಡ್ಡಾಯವಾದ್ದರಿಂದ ಬಾಲಕಿ ಇನ್ನೂ ಅಪ್ರಾಪ್ತಳು ಎಂದು ತಿಳಿದಿದ್ದು, ಮಕ್ಕಳ ಕಲ್ಯಾಣ ಸಂಸ್ಥೆಗೆ ಆಸ್ಪತ್ರೆ ಸಿಬ್ಬಂದಿ ದೂರು ನೀಡಿದ್ದಾರೆ. ತನಿಖೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.

- Advertisement -

Latest News

error: Content is protected !!