Saturday, May 4, 2024
Homeಅಪರಾಧಕಲ್ಲುಗುಂಡಿ ರಸ್ತೆ ಬದಿ ಅಳವಡಿಸಿದ್ದ ಬ್ಯಾನರ್ ಹರಿದ ಯುವಕರು - ಕೇಸು ದಾಖಲು

ಕಲ್ಲುಗುಂಡಿ ರಸ್ತೆ ಬದಿ ಅಳವಡಿಸಿದ್ದ ಬ್ಯಾನರ್ ಹರಿದ ಯುವಕರು – ಕೇಸು ದಾಖಲು

spot_img
- Advertisement -
- Advertisement -

ಸುಳ್ಯ: ಮಂಗಳೂರಿನಿಂದ ಕುಶಾಲನಗರಕ್ಕೆ ಪ್ರವಾಸ ತೆರಳಿದ ಯುವಕರು ಕಲ್ಲುಗುಂಡಿಯಲ್ಲಿ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಬ್ಯಾನರ್‌ನ್ನು ಹರಿದಿದ್ದು, ಆ ಯುವಕರನ್ನು ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ ಘಟನೆ ಮೇ.29 ರಂದು ರಾತ್ರಿ ವರದಿಯಾಗಿದೆ.


ಕಲ್ಲುಗುಂಡಿ ಪುಳಿಯತ್ತಡಿ ಬಳಿ ಹಾಕಲಾಗಿದ್ದಎಸ್‌ಡಿಪಿಐ ಸಮಾವೇಶದ ಬ್ಯಾನರ್ ಹಾಗೂ ಕಾಂಗ್ರೆಸ್ ಪಕ್ಷದ ಅಭಿನಂದನೆಯ ಬ್ಯಾನರನ್ನು ಮೇ.೨೮ರಂದು ರಾತ್ರಿ ಹರಿಯಲಾಗಿತ್ತು. ಮಂಗಳೂರು ಮೂಲದ 19 ಮಂದಿ ಯುವಕರು ಕುಶಾಲನಗರಕ್ಕೆ ಎಸ್‌ಎಂಎಲ್ ಇಪ್ಯೂಟ್ರಾವೆಲ್ ವಾಹನದಲ್ಲಿ ಪ್ರವಾಸಕ್ಕೆಂದು ತೆರಳಿದ್ದರು. ಅವರ ವಾಹನವು ಗೂನಡ್ಕಪುಳಿಯತ್ತಡಿ ಎಂಬಲ್ಲಿ ಚಾಲಕ ಉಪಾಹಾರ ಸೇವಿಸಲು ನಿಲ್ಲಿಸಿದ್ದನೆಂದೂ ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ವಿಶ್ರಾಂತಿ ಪಡೆದಿದ್ದರೆನ್ನಲಾಗಿದೆ.


ಈ ಸಂದರ್ಭದಲ್ಲಿ ವಾಹನದಲ್ಲಿ ಇದ್ದ ಯುವಕರು ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಎಸ್‌ಡಿಪಿಐ ಸಮಾವೇಶದ ಬ್ಯಾನರ್, ಕಾಂಗ್ರೆಸ್ ಪಕ್ಷದ ನಾಲ್ಕು ಬ್ಯಾನರ್‌ಗಳನ್ನು ಹರಿದು ಹಾಕಿ ಅಲ್ಲಿಂದ ತೆರಳಿ ದ್ದರು. ಬ್ಯಾನರ್ ಹರಿಯುವುದನ್ನು ಎಸ್‌ಡಿಪಿಐ ಸಮಿತಿಯ ಕಾರ್ಯದರ್ಶಿ ಶರೀಫ್ ಎಂಬವರು ನೋಡಿದ್ದರು. ಆದರೆ ಅವರು ಅದನ್ನು ಪ್ರಶ್ನಿಸದೆ ಯುವಕರು ಬಂದಿದ್ದ ವಾಹನದ ನಂಬರನ್ನು ಬರೆದುಕೊಂಡರು. ಶರೀಫ್‌ರವರು ಇದನ್ನು ಅಶ್ರಫ್ ಟರ್ಲಿಯವರಿಗೆ ತಿಳಿಸಿದರು.
ಅವರು ಬರೆದುಕೊಂಡ ಕೆಎ.20 ಡಿ1455 ನಂಬರನ್ನು ಸುಳ್ಯ ಪೊಲೀಸರಿಗೆ ನೀಡಿ ಘಟನೆಯನ್ನು ವಿವರಿಸಿ ದರು. ಪೊಲೀಸರು ತನಿಖೆ ಆರಂಭಿಸಿದರು.

ಈ ವೇಳೆ ಪೊಲೀಸರಿಗೆ ಯುವಕರು ತೆರಳಿದ ವಾಹನದ ಚಾಲಕನ ಮೊಬೈಲ್ ನಂಬರ್ ದೊರಕಿತು.

- Advertisement -
spot_img

Latest News

error: Content is protected !!