Saturday, June 6, 2026
Homeಕರಾವಳಿಬೆಳ್ತಂಗಡಿ : ಸವಣಾಲು ದೇವಸ್ಥಾನದ ಅರ್ಚಕ ವಿಜಯ್ ಭಟ್ ಆತ್ಮಹತ್ಯೆ

ಬೆಳ್ತಂಗಡಿ : ಸವಣಾಲು ದೇವಸ್ಥಾನದ ಅರ್ಚಕ ವಿಜಯ್ ಭಟ್ ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ :ಸವಣಾಲು ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ರೂಂ ನಲ್ಲಿ ಪಕ್ಕಸಿನ ಅಡ್ಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.4 ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಸವಣಾಲು ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನ ದಲ್ಲಿ ಅರ್ಚಕರಾಗಿದ್ದ ಶಿರ್ಸಿ ಮೂಲದ ವಿಜಯ್ ಭಟ್(29) ದೇವಸ್ಥಾನದ ಹಿಂಭಾಗದ ರೂಂನಲ್ಲಿ ಮೇ.4 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದು. ಮೂರು ತಿಂಗಳ ಮಗು ಕೂಡ ಇದೆ. ರೂಂ ನಲ್ಲಿ ಒಬ್ಬರೆ ವಾಸವಾಗಿದ್ದು . ಇಂದು ಪೂಜೆಗೆ ಬಂದಿಲ್ಲ ಎಂದು ಕರೆಯಲು ರೂಂ ಗೆ ಹೋದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!