Saturday, October 17, 2026
Homeಕರಾವಳಿಮಂಗಳೂರುಮಂಗಳೂರು: ಕಾಲೇಜು ಫೆಸ್ಟ್ ವಿಚಾರಕ್ಕೆ ರಸ್ತೆಯಲ್ಲಿ ಬಡಿದಾಡಿಕೊಂಡ ವಿದ್ಯಾರ್ಥಿಗಳು

ಮಂಗಳೂರು: ಕಾಲೇಜು ಫೆಸ್ಟ್ ವಿಚಾರಕ್ಕೆ ರಸ್ತೆಯಲ್ಲಿ ಬಡಿದಾಡಿಕೊಂಡ ವಿದ್ಯಾರ್ಥಿಗಳು

- Advertisement -
- Advertisement -

ಮಂಗಳೂರು: ಕಾಲೇಜು ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಬೀದಿ‌ಯಲ್ಲಿ ಹೊಡೆದಾಡಿಕೊಂಡ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.

ಮಂಗಳೂರು ಹೊರ ವಲಯ ವಳಚ್ಚಿಲ್‌ನ ಖಾಸಗಿ ಕಾಲೇಜಿನಲ್ಲಿ ಕಾಲೇಜು ಫೆಸ್ಟಿವಲ್ ವಿಚಾರಕ್ಕೆ ಹೊಡೆದಾಟ ಸಂಭವಿಸಿದೆ.

ಖಾಸಗಿ ಕಾಲೇಜಿನ ಜ್ಯೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದು,
ನೂಕಾಡಿ ತಳ್ಳಾಡಿ ಪರಸ್ಪರ ಬಡಿದಾಡಿದ್ದಾರೆ.

ಕೇರಳ ಮೂಲದ ವಿದ್ಯಾರ್ಥಿಗಳಿಂದ ಹೊಡೆದಾಟ ನಡೆದಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ಬಳಿಕ ಗಲಾಟೆ ತಣ್ಣಗಾಗಿದೆ.

- Advertisement -

Latest News

error: Content is protected !!