Friday, March 29, 2024
Homeತಾಜಾ ಸುದ್ದಿ2021ನೇ ಸಾಲಿನ ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಉತ್ತರ ಪ್ರದೇಶದ ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್,...

2021ನೇ ಸಾಲಿನ ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಉತ್ತರ ಪ್ರದೇಶದ ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್, ದಾವಣಗೆರೆಯ ಅವಿನಾಶ್ ರಾಜ್ಯಕ್ಕೆ ಟಾಪರ್

spot_img
- Advertisement -
- Advertisement -

ನವದೆಹಲಿ: 2021ನೇ ಸಾಲಿನ‌ ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ.ಉತ್ತರ ಪ್ರದೇಶದ ಬಿಜ್ನೋರ್ ಮೂಲದ ಶ್ರುತಿ ಶರ್ಮಾ ಮೊದಲ ರ್ಯಾಂಕ್ ಪಡೆದಿದ್ದು, ಅಂಕಿತಾ ಅಗರ್ ವಾಲ್ ಎರಡನೇ ಮತ್ತು ಗಾಮಿನಿ ಸಿಂಗ್ಲಾ ಮೂರನೇ ರ್ಯಾಂಕ್ ಪಡೆದಿದ್ದಾರೆ. ‌

ದಾವಣಗೆರೆ ಜಿಲ್ಲೆಯ ಅವಿನಾಶ್ 31ನೇ ರ್ಯಾಂಕ್ ಪಡೆದಿದ್ದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಮುಖ್ಯ ಪರೀಕ್ಷೆಯ ಫಲಿತಾಂಶ ಮಾರ್ಚ್ 17 ರಂದು ಪ್ರಕಟವಾಗಿತ್ತು. ಏಪ್ರಿಲ್ 5 ರಿಂದ ಮೇ 26 ರವರೆಗೆ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ ನಡೆದಿತ್ತು.

ಒಟ್ಟು 685 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಯುಪಿಎಸ್ಸಿ ಯ ಅಧಿಕೃತ ವೆಬ್ ಸೈಟ್ upsc.gov.in ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

- Advertisement -
spot_img

Latest News

error: Content is protected !!