Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು: ಗ್ರಾಮದೊಳಗೆ ನುಗ್ಗಿದ ಕಾಡಾನೆ!

ಚಿಕ್ಕಮಗಳೂರು: ಗ್ರಾಮದೊಳಗೆ ನುಗ್ಗಿದ ಕಾಡಾನೆ!

- Advertisement -
- Advertisement -

ಚಿಕ್ಕಮಗಳೂರು: ಗ್ರಾಮದ ಒಳಗೆ ಕಾಡಾನೆ ನುಗ್ಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿಯಲ್ಲಿ ಘಟನೆ ನಡೆದಿದೆ. ಏಕಾಏಕಿ ಗ್ರಾಮಕ್ಕೆ ಕಾಡಾನೆ ನುಗ್ಗಿದ್ದರಿಂದ ಜನರು ಭಯಗೊಂಡಿದ್ದಾರೆ.

ಕಾಡಾನೆ ಓಡಿಸಲು ಅರಣ್ಯ ಸಿಬ್ಬಂದಿಗಳು ಹರ ಸಾಹಸಪಟ್ಟಿದ್ದಾರೆ‌. ಇನ್ನು ಮೂಲರಹಳ್ಳಿ ಗ್ರಾಮದಲ್ಲಿಯೂ ಗಜಪಡೆಗಳಿಂದ ಬೆಳೆ ನಾಶ ಮಾಡಲ್ಪಟ್ಟಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ಮೆಣಸು ಬೆಳೆಗೆ ಹಾನಿ ಉಂಟಾಗಿದೆ.
ಕಾಡಾನೆಗಳ ನಿರಂತರ ದಾಳಿಯಿಂದ ಕಂಗೆಟ್ಟಿರುವ ರೈತರು ಅರಣ್ಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!