Monday, May 6, 2024
Homeಕರಾವಳಿಬೆಳ್ತಂಗಡಿ : ನೆರಿಯ ಅರಣ್ಯದಲ್ಲಿ ಅಕ್ರಮ ಕಡವೆ ಬೇಟೆ: ಕಡವೆ ಮಾಂಸ, ಬಂದೂಕು ಸಹಿತ ಓರ್ವ...

ಬೆಳ್ತಂಗಡಿ : ನೆರಿಯ ಅರಣ್ಯದಲ್ಲಿ ಅಕ್ರಮ ಕಡವೆ ಬೇಟೆ: ಕಡವೆ ಮಾಂಸ, ಬಂದೂಕು ಸಹಿತ ಓರ್ವ ಬಂಧನ

spot_img
- Advertisement -
- Advertisement -

ಬೆಳ್ತಂಗಡಿ : ಚಾರ್ಮಾಡಿ ಕನಪ್ಪಾಡಿ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಗಿ ಮಾಂಸ ಮಾಡಿ ಮನೆಯಲ್ಲಿ ಶೇಖರಿಸಿಟ್ಟ ಬಗ್ಗೆ
ಜ.7 ರಂದು ಬೆಳ್ತಂಗಡಿ ಅರಣ್ಯ ಇಲಾಖೆ ದಾಳಿ ಮಾಡಿದ್ದು‌. ಕಡವೆ ಮಾಂಸ ಸಹಿತ ದೇಹದ ಹಲವು ಭಾಗಗಳನ್ನು ವಶಕ್ಕೆಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ವ್ಯಾಪ್ತಿಯ ಚಾರ್ಮಾಡಿ ಕನಪ್ಪಾಡಿ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಡಿದ ಆರೋಪಿ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕುಳೆನಾಡಿ ನಿವಾಸಿ ದಿ.ತುಂಗಯ್ಯ ಗೌಡರ‌ ಮಗ ಕೆ.ಅಶೋಕ್ ಕುಮಾರ್ (59) ಎಂಬಾತನನ್ನು ಬಂಧಿಸಲಾಗಿದೆ.

ವಶಪಡಿಸಿಕೊಂಡ ವಸ್ತುಗಳು:
ಕಡವೆ ತಲೆ ಭಾಗ ಸಹಿತ ಎರಡು ಕೊಂಬು , 4 ಕೆ.ಜಿ ಕಡವೆ ಮಾಂಸ , ಕಡವೆಯ ಮೂರು ಕಾಲು, ಕಡವೆಯ ದೇಹದ ಚರ್ಮ, ಸಿಂಗಲ್ ಬ್ಯಾರಲ್ ಬಂದೂಕು, ಒಂದು ಗುಂಡು, ಒಂದು ಬೇಟೆಯಾಡಲು ಬಳಸಿದ ಖಾಲಿ ಗುಂಡು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ  ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಕಾಯ್ದೆ 9, 39,50 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆ:ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ದಡದ ಕುಮಾರ್ , ನೆರಿಯ ವಲಯ ಉಪ ಅರಣ್ಯಾಧಿಕಾರಿ ಯತೀಂದ್ರ ಕುಮಾರ್, ಬೆಳ್ತಂಗಡಿ ಉಪ ಅರಣ್ಯಾಧಿಕಾರಿ ಪಾಂಡುರಂಗ ಕಮಾತಿ, ಉಜಿರೆ ಉಪ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ನಾವೂರು ಉಪ ವಲಯ ಅರಣ್ಯಾಧಿಕಾರಿ ರಾಜೇಶ್ ,ಗೇರುಕಟ್ಟೆ ಉಪ ವಲಯ ಅರಣ್ಯಾಧಿಕಾರಿ ಪೂಜಾ, ಬೆಳ್ತಂಗಡಿ ಉಪ ವಲಯ ಅರಣ್ಯಾಧಿಕಾರಿ ರವೀಂದ್ರ ಕೆ, ಅರಣ್ಯ ಗಸ್ತು ಪಾಲಕ ರವಿ ಮುಖ್ರಿ ಮತ್ತು ಪರಮೇಶ್ವರ.ಎ, ಅರಣ್ಯ ಅಧಿಸೂಚಿತ ನೌಕರ ಬಾಲಕೃಷ್ಣ ಮತ್ತು ಘಫೂರ್ ಮತ್ತು ಚಾಲಕ ಕುಸಲಪ್ಪ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!