Thursday, June 4, 2026
Homeಕರಾವಳಿಉಪ್ಪಿನಂಗಡಿ; ರಾಮಕುಂಜದಲ್ಲಿ ಕೆರೆಗೆ ಬಿದ್ದ ಬೃಹತ್ ಕಾಡುಕೋಣ

ಉಪ್ಪಿನಂಗಡಿ; ರಾಮಕುಂಜದಲ್ಲಿ ಕೆರೆಗೆ ಬಿದ್ದ ಬೃಹತ್ ಕಾಡುಕೋಣ

- Advertisement -
- Advertisement -

ಉಪ್ಪಿನಂಗಡಿ: ಬೃಹತ್ ಗಾತ್ರದ ಕಾಡುಕೋಣವೊಂದು ಕೆರೆಗೆ ಬಿದ್ದ ಘಟನೆ ಕಡಬ ತಾಲೂಕಿನ ರಾಮಕುಂಜದ ಕಾರ್ಜಾಲು ಎಂಬಲ್ಲಿ ನಡೆದಿದೆ.

ರಾಮಕುಂಜದ ಕಾರ್ಜಾಲು ಎಂಬಲ್ಲಿ ಹೊನ್ನಪ್ಪ ಗೌಡ ಎನ್ನುವವರಿಗೆ ಸೇರಿದ ತೋಟಕ್ಕೆ ಆಹಾರ ಅರಸಿ ಕೃಷಿ ಬಂದ ಕಾಡುಕೋಣ ಅಲ್ಲಿದ್ದ ಕೆರೆಗೆ ನಿನ್ನೆ ರಾತ್ರಿ ಬಿದ್ದಿದೆ. ಮನೆ ಮಂದಿ ಮುಂಜಾನೆ ತೋಟಕ್ಕೆ ಬಂದಾಗ ಕಾಡುಕೋಣ ಕೆರೆಯಲ್ಲಿರುವುದು ಪತ್ತೆಯಾಗಿದೆ.

ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ನೇತೃತ್ವದಲ್ಲಿ ಕಾಡುಕೋಣದ ರಕ್ಷಣಾ ಕಾರ್ಯಾಚರಣೆ ನಡೆಸಿ, ಕೆರೆಯ ಒಂದು ಬದಿಯಲ್ಲಿ ದಾರಿಯಂತೆ ಮಾಡಿ ಕಾಡುಕೋಣ ಹೊರ ಹೋಗುವಂತೆ ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂದಿ ಮಾಡಿದ್ದಾರೆ.

- Advertisement -

Latest News

error: Content is protected !!