Thursday, June 4, 2026
Homeಕರಾವಳಿಮಂಗಳೂರು:ಬೈಕ್ ಅಪಘಾತಕ್ಕೆ ವೈದ್ಯಕೀಯ ವಿದ್ಯಾರ್ಥಿ ಬಲಿ

ಮಂಗಳೂರು:ಬೈಕ್ ಅಪಘಾತಕ್ಕೆ ವೈದ್ಯಕೀಯ ವಿದ್ಯಾರ್ಥಿ ಬಲಿ

- Advertisement -
- Advertisement -

ಮಂಗಳೂರು; ಬೈಕ್ ಅಪಘಾತಕ್ಕೆ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿರುವ ಘಟನೆ ಕುತ್ತಾರು ಸಮೀಪದ ಮದಕ ಕ್ವಾಟ್ರಗುತ್ತು ಬಳಿ ನಡೆದಿದೆ. ಬೆಂಗಳೂರು ನಿವಾಸಿ ಪ್ರಸ್ತುತ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ದ್ವಿತೀಯ ವರ್ಷದ ಇಂಟನ್೯ಶಿಪ್ ವಿದ್ಯಾರ್ಥಿಯಾ ನಿಶಾಂತ್ ( 22) ಮೃತ ದುರ್ದೈವಿ.ಸಹಸವಾರ ಬೀದರ್ ನಿವಾಸಿ ಶಕೀಬ್ ಗಾಯಗೊಂಡಿದ್ದಾರೆ.

ಇಬ್ಬರೂ ಕಣಚೂರು‌ ಕಾಲೇಜು ವಿದ್ಯಾರ್ಥಿಗಳಾಗಿದ್ದು ಕುತ್ತಾರು ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದರು.ತಡ ರಾತ್ರಿ ಬೈಕಿನಲ್ಲಿ ರೈಡ್ ಹೋಗುವಾಗ ರಸ್ತೆಯಲ್ಲಿದ್ದ ಹಂಪ್ ಗಮನಕ್ಕೆ ಬಾರದೇ, ಬೈಕ್ ಮೇಲಕ್ಕೆ ಹಾರಿ ರಸ್ತೆಗೆಸೆಯಲ್ಪಟ್ಟು ನಿಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಶಕೀಬ್ ಗಾಯಗೊಂಡಿದ್ದಾರೆ.ಈ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!