Thursday, June 4, 2026
Homeತಾಜಾ ಸುದ್ದಿದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ನಡೆಯಿತೊಂದು ಅಮಾನುಷ ಕೃತ್ಯ; ತಂದೆಯನ್ನು ಕೊಂದು ದೇಹವನ್ನು 30 ತುಂಡುಗಳಾಗಿ ಕತ್ತರಿಸಿದ...

ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ನಡೆಯಿತೊಂದು ಅಮಾನುಷ ಕೃತ್ಯ; ತಂದೆಯನ್ನು ಕೊಂದು ದೇಹವನ್ನು 30 ತುಂಡುಗಳಾಗಿ ಕತ್ತರಿಸಿದ ಪಾಪಿ ಮಗ

- Advertisement -
- Advertisement -

ಬಾಗಲಕೋಟೆ; ದೆಹಲಿಯ ಶ್ರದ್ಧಾ ಕೊಲೆಯ ಮಾದರಿಯಲ್ಲೇ ಅತ್ಯಂತ ಅಮಾನುಷ, ಭೀಕರ ಕೊಲೆಯೊಂದು ನಮ್ಮ ರಾಜ್ಯದಲ್ಲೂ ನಡೆದಿದ್ದು ನಾವೆಲ್ಲಾ ತಲೆ ತಗ್ಗಿಸುವಂತಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ಮಗನೇ ತನ್ನ ತಂದೆಯನ್ನು ಕೊಂದು ದೇಹವನ್ನು 30 ತುಂಡುಗಳಾಗಿ ಕತ್ತರಿಸಿದ್ದಾನೆ.

ಪರಶುರಾಮಪ್ಪ ಕುಳಲಿ (54) ಎಂಬಾತನನ್ನು ಮಗ ವಿಠ್ಠಲ ಕುಳಲಿ ರಾಡ್ ನಿಂದ ಹೊಡೆದು ಕೊಲೆ ಮಾಡಿ ದೇಹವನ್ನು 30 ಭಾಗಗಳಾಗಿ ಕತ್ತರಿಸಿದ್ದಾನೆ. ಇದೀಗ ಆರೋಪಿ ವಿಠಲ್ ಕುಳಲಿಯನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ.

ಮೃತರ ಪತ್ನಿ ಸರಸ್ವತಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.ಪರಶುರಾಮ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ವಿಠಲ್ ಕೊಲೆ ಮಾಡಿ ನಿರುಪಯುಕ್ತ ಬೋರ್ವೆಲ್ ನಲ್ಲಿ ಅಂಗಾಂಗಗಳನ್ನು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

- Advertisement -

Latest News

error: Content is protected !!