Thursday, June 4, 2026
Homeಕರಾವಳಿಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ಸೆಲ್ ಗಳು ಯಾಕೆ...? ಈ ತಾರತಮ್ಯ ಜೈಲಿನಲ್ಲೂ...

ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ಸೆಲ್ ಗಳು ಯಾಕೆ…? ಈ ತಾರತಮ್ಯ ಜೈಲಿನಲ್ಲೂ ಯಾಕೆ ನಡೆಯುತ್ತಿದೆ : ಯು. ಟಿ. ಖಾದರ್

- Advertisement -
- Advertisement -

ಮಂಗಳೂರು: ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ಸೆಲ್ ಗಳಿವೆ. ಒಂದು ಸೆಲ್ ನಲ್ಲಿ ಹಿಂದೂ ಕೈದಿಗಳಿದ್ದರೆ, ಮತ್ತೊಂದು ಸೆಲ್ ನಲ್ಲಿ ಮುಸ್ಲಿಂ ಕೈದಿಗಳಿದ್ದಾರೆ. ಈ ತಾರತಮ್ಯ ಜೈಲಿನಲ್ಲೂ ನಡೆಯುತ್ತಿದೆ. ಇದನ್ನು ನಿಲ್ಲಿಸಿ, ಎಲ್ಲರನ್ನೂ ಮಿಕ್ಸ್ ಮಾಡಿ ಹಾಕಿ ಎಂದು ಸಲಹೆ ನೀಡಿದ್ದಾರೆ.

ಮಂಗಳೂರಲ್ಲಿ ಈ ರೀತಿಯ ಸಮಸ್ಯೆ ಉಂಟಾಗಿದೆ. ಜೈಲಿನಲ್ಲಿ ನೀವು ಈ ರೀತಿ ಮಾಡಿದ್ರೆ, ಅವರು ಹೊರಗೆ ಬಂದು ಏನು ಮಾಡ್ತಾರೆ? ಅದೇ ಮೆಂಟಾಲಿಟಿ ಇಟ್ಟುಕೊಂಡು ಬಂದು ಹೊರಗೂ ಬಂದು ಅದೇ ಮಾಡ್ತಾರೆ. ಹಿಂದೂ, ಮುಸ್ಲಿಂ ಖೈದಿಗಳನ್ನು ಒಂದೇ ಸೆಲ್ ಗೆ ಹಾಕಿ.

ಅವರನ್ನು ಯಾಕೆ ಬೇರೆ ಬೇರೆ ಸೆಲ್ ಗೆ ಹಾಕೋದು? ಅವರನ್ನು ಅಲ್ಲೇ ಒಟ್ಟಿಗೆ ಹಾಕಿ, ಅಲ್ಲಿ ಅವರು ಹೊಡೆದುಕೊಂಡು ಸಾಯಲಿ, ಅವರು ಹೊರಗೆ ಬಂದು ಗಲಾಟೆ ಮಾಡೋದು ಬೇಡ, ಅವರು ಹೊರಗೆ ಬಂದು ಕೂಡ ಅದನ್ನೇ ಬಿಂಬಿಸ್ತಾರೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಶಾಸಕ ಯು.ಟಿ. ಖಾದರ್ ಕ್ರಿಮಿನಲ್ ಭೇಟಿ ಮಾಡುವ ವಿಸಿಟರ್ ಗಳ ಮೇಲೆಯೂ ನಿಗಾ ವಹಿಸಲು ಕ್ರಮ ಜರುಗಿಸಿ ಎಂದರು.

- Advertisement -

Latest News

error: Content is protected !!