Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು: ರೇಗಿಸಿದವನನ್ನು ಅಟ್ಟಾಡಿಸಿ ಕೈ ಕಚ್ಚಿದ ಕೋತಿ!

ಚಿಕ್ಕಮಗಳೂರು: ರೇಗಿಸಿದವನನ್ನು ಅಟ್ಟಾಡಿಸಿ ಕೈ ಕಚ್ಚಿದ ಕೋತಿ!

- Advertisement -
- Advertisement -

ಚಿಕ್ಕಮಗಳೂರು: ಮಂಗ ಒಂದು ಮೂರು ಜನರ ಮೇಲೆ ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಗ ಒಂದು ನುಗ್ಗಿದ್ದು,ರೇಗಿಸಿದವನನ್ನು ಹುಡುಕಿ ಕೈ ಕಚ್ಚಿ ಗಾಯಗೊಳಿಸಿದೆ.ನಿನ್ನೆ ಬೇರೆಯವರ ತಲೆ ಮೇಲೆ ಕೂತು ಕೋತಿ ಆಟವಾಡಿದ್ದು, ಆತನಿಗೆ ತೊಂದರೆ ಮಾಡಲಿಲ್ಲ. ಆದರೆ ಇದೆ ಸಂದರ್ಭದಲ್ಲಿ ಆಟೋ ಚಾಲಕನೊಬ್ಬ ಮಂಗನಿಗೆ ರೇಗಿಸಿದ್ದು, ಸಿಟ್ಟಿಗೆದ್ದ ಕೋತಿ ಆಟೋ ಚಾಲಕ ಜಗದೀಶ್​ನನ್ನು ಹುಡುಕಿ ಕೈ ಕಚ್ಚಿದೆ.

ಕೋತಿಗೆ ಹೆದರಿ ಆಟೋ, ಕಾರುಗಳಲ್ಲಿ ಜಗದೀಶ್ ಕದ್ದು ಕೂತಿದ್ದರೂ ಬಿಡದೆ ದಾಳಿ ಮಾಡಿದೆ. ಅಲ್ಲದೆ ಜಗದೀಶ್ ರವರ ಆಟೋದ ಸೀಟು ಕೂಡ ಹರಿದು ಹಾಕಿದೆ. ಅರಣ್ಯ ಸಿಬ್ಬಂದಿಗಳಿಗೂ ಸಿಗದೆ ಕೋತಿ ಓಡಾಡುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

- Advertisement -

Latest News

error: Content is protected !!