Saturday, April 27, 2024
Homeಉತ್ತರ ಕನ್ನಡಕುಮಟಾದಲ್ಲಿ ಎರಡನೇ ಬಾರಿಗೆ ಪತ್ತೆಯಾದ ಬಿಳಿ ಹೆಬ್ಬಾವು

ಕುಮಟಾದಲ್ಲಿ ಎರಡನೇ ಬಾರಿಗೆ ಪತ್ತೆಯಾದ ಬಿಳಿ ಹೆಬ್ಬಾವು

spot_img
- Advertisement -
- Advertisement -

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಎರಡನೇ ಬಾರಿಗೆ ಅಪರೂಪದ ಬಿಳಿ ಹೆಬ್ಬಾವು ಕಾಣಿಸಿಕೊಂಡಿದೆ.

ಕುಮಟಾ‌ ತಾಲೂಕಿನ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎಂಬವರ ಮನೆಯ ಅಂಗಳದಲ್ಲಿ ಪತ್ತೆಯಾದ ಬಿಳಿ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಪವನ್ ರಕ್ಷಣೆ ಮಾಡಿದ್ದಾರೆ.

ಕರ್ನಾಟಕದಲ್ಲೇ ಮೂರನೇ ಬಾರಿ ಪತ್ತೆಯಾದ ಬಿಳಿ ಹೆಬ್ಬಾವು ಇದಾಗಿದ್ದು, ಎರಡು ಸಲ ಕುಮಟಾದಲ್ಲೇ ಕಾಣಿಸಿಕೊಂಡಿದ್ದು ವಿಶೇಷವಾಗಿದೆ‌.

ರಕ್ಷಣೆ ಮಾಡಿದ ಬಿಳಿ ಹೆಬ್ಬಾವನ್ನು ಉರಗ ತಜ್ಞ ಪವನ್ ನಾಯ್ಕ್ ಕುಮಟಾ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.ಕಳೆದ ವರ್ಷವಷ್ಟೇ ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಪತ್ತೆಯಾಗಿತ್ತು.

- Advertisement -
spot_img

Latest News

error: Content is protected !!