Thursday, June 25, 2026
Homeತಾಜಾ ಸುದ್ದಿಮಂಗಳೂರು: ಅಮಿತ್‌ ಶಾ ರಾಜ್ಯಕ್ಕೆ ಬಂದಾಗ ಪಕ್ಷದ ಬಗ್ಗೆಯಷ್ಟೇ ಚರ್ಚೆ: ಜನರ ಸಂಕಷ್ಟಗಳ ಬಗ್ಗೆ ಯಾಕೆ...

ಮಂಗಳೂರು: ಅಮಿತ್‌ ಶಾ ರಾಜ್ಯಕ್ಕೆ ಬಂದಾಗ ಪಕ್ಷದ ಬಗ್ಗೆಯಷ್ಟೇ ಚರ್ಚೆ: ಜನರ ಸಂಕಷ್ಟಗಳ ಬಗ್ಗೆ ಯಾಕೆ ಚರ್ಚಿಸಿಲ್ಲ? ಖಾದರ್‌ ಕಿಡಿ

- Advertisement -
- Advertisement -

ಮಂಗಳೂರು: ಜಿಲ್ಲೆಯಾದ್ಯಂತ ಅತಿವೃಷ್ಠಿಯಿಂದ ಜನರು ಸಂಕಷ್ಟಪಡುತ್ತಿದ್ದಾರೆ. ಇವರಿಗೆ ತಾತ್ಕಾಲಿಕ ಪರಿಹಾರವನ್ನು ನೀಡುವ ಬಗ್ಗೆ ರಾಜ್ಯ ಸರಕಾರ ಯಾವುದೇ ಕಾಳಜಿ ತೋರುತ್ತಿಲ್ಲ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾತನಾಡಿದ ಶಾಸಕ ಖಾದರ್, ಪ್ರಾಕೃತಿಕ ವಿಕೋಪಕ್ಕೆ ಪರಿಹಾರವನ್ನು ಎನ್‌ಡಿಆರ್‌ಫ್‌ನಿಂದ ನೀಡಲಾಗುತ್ತದೆ. ಅದರ ಮುಖ್ಯಸ್ಥರಾದ ಕೇಂದ್ರದ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾಗ ಕೇವಲ ಪಕ್ಷದ ಬಗ್ಗೆ ಮಾತ್ರ ಚರ್ಚಿಸಿದ್ದಾರೆ. ಜನರ ಸಂಕಷ್ಟಗಳ ಬಗ್ಗೆ ಚರ್ಚಿಸಿಲ್ಲ. ಎನ್‌ಡಿಆರ್‌ಎಫ್‌ನಡಿ ಕೇಂದ್ರದಿಂದ ರಾಜ್ಯದ ಹಕ್ಕನ್ನು ಕೇಳುವನಿಟ್ಟಿನಲ್ಲಿ ಮನವಿ ಸಲ್ಲಿಸಲಾಗಿಲ್ಲ. ರಾಜ್ಯದ 25 ಸಂಸದರು ಮೌನವಾಗಿದ್ದರು. ಇದು ಜನತೆಗೆ ಮಾಡಿರುವ ಅವಮಾನ ಎಂದರು.

- Advertisement -

Latest News

error: Content is protected !!