Friday, June 5, 2026
Homeತಾಜಾ ಸುದ್ದಿಸಿದ್ದರಾಮೋತ್ಸವಕ್ಕೂ ನಮ್ಮ ರಾಜಕಾರಣಕ್ಕೂ ಸಂಬಂಧವಿಲ್ಲ: ಮತ್ತೆ ಅಧಿಕಾರಕ್ಕೆ ಬರೋದು ನಾವೇ: ಸಚಿವ ಕೋಟ ಶ್ರೀನಿವಾಸ್ ಪೂಜಾರಿ

ಸಿದ್ದರಾಮೋತ್ಸವಕ್ಕೂ ನಮ್ಮ ರಾಜಕಾರಣಕ್ಕೂ ಸಂಬಂಧವಿಲ್ಲ: ಮತ್ತೆ ಅಧಿಕಾರಕ್ಕೆ ಬರೋದು ನಾವೇ: ಸಚಿವ ಕೋಟ ಶ್ರೀನಿವಾಸ್ ಪೂಜಾರಿ

- Advertisement -
- Advertisement -

ಹಾವೇರಿ: ಸಿದ್ದರಾಮೋತ್ಸದವ ಬಗ್ಗೆ ಬಿಜೆಪಿ ಪಾಳಯದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಇನ್ನು ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಶ್ರೀನಿವಾಸ್‌ ಪೂಜಾರಿ, ಸಿದ್ದರಾಮಯ್ಯನವರು 75 ವರ್ಷ ಆಗಿದೆ ಎಂದು ಅವರ ಖಾಸಗಿ ಉತ್ಸವ ಮಾಡಿಕೊಂಡಿದ್ದಾರೆ.ಅದಕ್ಕೂ ನಮ್ಮ ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಸೈದ್ಧಾಂತಿಕ ಮತ್ತು ಸಂಘಟನಾತ್ಮಕ ಹೋರಾಟದಿಂದ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಸಿದ್ದರಾಮಯ್ಯನವರ ಖಾಸಗಿ ಉತ್ಸವಕ್ಕೂ ನಮ್ಮ ರಾಜಕೀಯ ಸಂಘಟನೆಗೂ ಸಂಬಂಧ ಇಲ್ಲ ಎಂದರು.

- Advertisement -

Latest News

error: Content is protected !!