Wednesday, June 26, 2024
Homeತಾಜಾ ಸುದ್ದಿನಟಿ ಪವಿತ್ರಾ ಗೌಡ ಮನೆಯಲ್ಲಿ ಸ್ಥಳ ಮಹಜರು ವೇಳೆ ಸಿಕ್ಕಿದ ವಸ್ತುಗಳೇನು?

ನಟಿ ಪವಿತ್ರಾ ಗೌಡ ಮನೆಯಲ್ಲಿ ಸ್ಥಳ ಮಹಜರು ವೇಳೆ ಸಿಕ್ಕಿದ ವಸ್ತುಗಳೇನು?

spot_img
- Advertisement -
- Advertisement -

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟಿ ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಇಂದು ಸ್ಥಳ ಮಹಜರು ನಡೆಸಿದ್ರು. ಈ ವೇಳೆ ಪೊಲೀಸರಿಗೆ ಹಲವು ವಸ್ತುಗಳು ದೊರೆತಿವೆ.

ಪ್ರಕರಣಮ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರನ್ನು ಸ್ಥಳ ಮಹಜರಿಗಾಗಿ ರಾಜ ರಾಜೇಶ್ವರಿ ನಗರದ ಅವರ ಮನೆಗೆ ಪೊಲೀಸರು ಕರೆ ತಂದ್ರು. ಈ ವೇಳೆ ಕೊಲೆ ನಡೆದ ದಿನ ಪವಿತ್ರಾ ಗೌಡ ರೇಣುಕಾಸ್ವಾಮಿ ಅವರಿಗೆ ಹಲ್ಲೆ ಮಾಡಿದ ಶೂ ಹಾಗೂ ಅಂದು ಧರಿಸಿದ್ದ ಬಟ್ಟೆಯನ್ನು ವಶಕ್ಕೆ ಪಡೆದಿದ್ದಾರೆ.ಇನ್ನು ಇದೇ ವೇಳೆ ಪವಿತ್ರಾ ಗೌಡ ಮನೆ ಕಲಸವನಾದ ಆರೋಪಿ ಪವನ್ ನನ್ನು ಮನೆಗೆ ಪೊಲೀಸರು ಕರೆದೊಯ್ದಿದ್ದರು.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಿಪಿಐ ನೇತೃತ್ವದಲ್ಲಿ ಎ.1 ಆರೋಪಿ ಪವಿತ್ರಾ ಗೌಡ, ಎ3 ಆರೋಪಿ ಪವನ್ ಕರೆದೊಯ್ದು ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಸ್ಥಳ ಮಹಜರು ಮಾಡಿದರು.ಪವಿತ್ರಾ ಗೌಡ ನಿವಾಸದಲ್ಲಿನ ಸ್ಥಳ ಮಹಜರು ಸಂದರ್ಭದಲ್ಲಿ ಅವರು ಬಳಸುತ್ತಿದ್ದಂತ ಶೂ, ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.ಈನ್ನು ಮನೆಯಿಂದ ಹೊರ ಬರುತ್ತಿದ್ದಂತೆ ಪವಿತ್ರಾ ಗೌಡ ನಗುತ್ತಲೇ ಹೊರಗೆ ಬಂದಿದ್ದು ಅಚ್ಚರಿ ಮೂಡಿಸಿತು.

- Advertisement -
spot_img

Latest News

error: Content is protected !!