- Advertisement -
![]()
- Advertisement -
ಕಾಸರಗೋಡು: ಮನೆ ಅಂಗಳದಲ್ಲಿ ಹಿಟಾಚಿ ತೊಳೆಯುತ್ತಿದ್ದಾಗ ಹಿಟಾಚಿ ಪಲ್ಟಿಯಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮಹಿಳಾ ಕಾಂಗ್ರೇಸ್ ನ ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ಅವರ ಪುತ್ರ ಪ್ರೀತಂ ಲಾಲ್ ಚಂದ್ (23) ಮೃತ ಯುವಕ.
ಮಂಗಳವಾರ ಬೆಳಗ್ಗೆ ಪ್ರೀತಂ ಲಾಲ್ ತನ್ನ ಅಜ್ಜಿಯ ಮನೆಯಲ್ಲಿ ಹಿಟಾಟಿಯನ್ನು ತೊಳೆಯುತ್ತಿದ್ದಾಗ ಹಿಟಾಚಿ ಪಲ್ಟಿಯಾಗಿದೆ. ಈ ವೇಳೆ ಪ್ರೀತಂ ಹಿಟಾಚಿ ಅಡಿ ಸಿಕ್ಕಿ ಬಿದ್ದಿದ್ದಾರೆ. ಹಿಟಾಚಿಯನ್ನು ಮೇಲೆತ್ತಿ ಅವರನ್ನು ಹೊರತೆಗೆಯಲು ಸಾಕಷ್ಟು ಸಮಯ ಹಿಡಿದಿದೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪ್ರೀತಂ ಲಾಲ್ ಚಂದ್ ತನ್ನ ಸಹೋದರ ಗೌತಮ್ ಲಾಲ್ ಅವರ ಹಿಟಾಚಿ ಯಂತ್ರದ ಕೆಲಸದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಬಗ್ಗೆ ಬೇಡಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


