Sunday, June 7, 2026
Homeತಾಜಾ ಸುದ್ದಿಪಶ್ಚಿಮ ಬಂಗಾಳ ಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್​ ಮೇಲೆ ಶಾಕ್: 'ಬಿಜೆಪಿ' ಸೇರ್ಪಡೆಯಾದ 'ಟಿಎಂಸಿ' ಪಕ್ಷದ...

ಪಶ್ಚಿಮ ಬಂಗಾಳ ಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್​ ಮೇಲೆ ಶಾಕ್: ‘ಬಿಜೆಪಿ’ ಸೇರ್ಪಡೆಯಾದ ‘ಟಿಎಂಸಿ’ ಪಕ್ಷದ ಐವರು ಶಾಸಕರು

- Advertisement -
- Advertisement -

ಕೋಲ್ಕತ: ಪಶ್ಚಿಮ ಬಂಗಾಳದ ಚುನಾವಣೆ ಘೋಷಣೆ ಬೆನ್ನಲ್ಲೇ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್ :ಎದುರಾಗಿದ್ದು, ಟಿಎಂಸಿಯ ಐವರು ಶಾಸಕರು ಹಾಗೂ ಈ ಬಾರಿ ಅಭ್ಯರ್ಥಿ ಪಟ್ಟಿಯಲ್ಲಿರುವ ಓರ್ವ ಅಭ್ಯರ್ಥಿ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಶಾಸಕರಾಗಿರುವ ಸೋನಾಲಿ ಗುಹಾ, ಸೀತಾಲ್ ಸರ್ದಾರ್, ದೀಪೇಂದು ಬಿಸ್ವಾಸ್, ರಬೀಂದ್ರನಾಥ್ ಭಟ್ಟಾಚಾರ್ಯ ಮತ್ತು ಜತು ಲಾಹಿರಿ ಸೋಮವಾರದಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇವರ ಜತೆ ಹಬೀಪುರದ ಟಿಎಂಸಿ ಅಭ್ಯರ್ಥಿ ಸರಲಾ ಮುರ್ಮು ಕೂಡ ಬಿಜೆಪಿಗೆ ಸೇರಿದ್ದಾರೆ. ಇದು ಆಡಳಿತದಲ್ಲಿರುವ ಟಿಎಂಸಿಗೆ ದೊಡ್ಡ ಶಾಕ್​ ಆಗಿದೆ.

ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಬಿಜೆಪಿ ನಾಯಕರಾದ ಸುವೆಂಡು ಅಧಿಕಾರಿ ಮತ್ತು ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!